ಶಿವಮೊಗ್ಗ : ಅಕ್ಟೋಬರ್ ತಿಂಗಳಿನ ಅಕಾಲಿಕ ಮಳೆಯಿಂದಾಗಿ ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿ, ತಡಸನಹಳ್ಳಿ, ಮದಗಹಾರನಹಳ್ಳಿ, ದಿಂಡದಹಳ್ಳಿ, ಮತ್ತು ದಬ್ಬಣಬೈರನಹಳ್ಳಿ ಗ್ರಾಮಗಳಲ್ಲಿ ರೈತರು ಬೆಳೆದ ಬಾಳೆ, ಶುಂಠಿ ಮತ್ತು ತರಕಾರಿ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿದ್ದು ನಷ್ಟ ಪರಿಹಾರ ಕೊಡಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿರುವುದರಿಂದ ಸಾರ್ವಜನಿಕರು ಆಕ್ಷೇಪಣೆಗಳನ್ನು ನ. 21 ರಂದು ಲಿಖಿತವಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿ, ಶಿಕಾರಿಪುರ ಇಲ್ಲಿಗೆ ಸಲ್ಲಿಸುವುದು.
ಸುಣ್ಣದಕೊಪ್ಪ ಗ್ರಾ.ಪಂ, ತಡಸಹಳ್ಳಿ ಗ್ರಾ. ಮಹೇಶಕುಮಾರ ಎ.ಜಿ ಇವರ 0.36 ಹೆ. ಟೋಮ್ಯಾಟೋ ಬೆಳೆ ಮತ್ತು 0.18 ಹೆ. ಬದನೆಕಾಯಿ ಬೆಳೆ ಹಾನಿಯಾಗಿದೆ. ತಡಸಹಳ್ಳಿ ಗ್ರಾ. ಪ್ರಾಂಶಾತ ಇವರ 0.40 ಹೆ. ಟೋಮ್ಯಾಟೋ ಬೆಳೆ ಮತ್ತು 0.18 ಹೆ. ಬದನೆಕಾಯಿ ಬೆಳೆ ಹಾನಿಯಾಗಿದೆ. ಕಡೇನಂದಿಗಳ್ಳಿ ಗ್ರಾ, ವಿಜಯಾ ಬಿ.ಬಿ ಇವರ 0.18 ಹೆ. ಶುಂಠಿ ಹಾಗೂ 0.08 ಹೆ. ಶುಂಠಿ ಬೆಳೆ ಹಾನಿಯಾಗಿದೆ. ಕಡೇನಂದಿಗಳ್ಳಿ ಗ್ರಾ, ಮಾಲತೇಶ ಇವರ 0.18 ಹೆ. ಶುಂಠಿ ಬೆಳೆ ಮತ್ತು 0.07 ಹೆ, ಶುಂಠಿ ಬೆಳೆ ಹಾನಿಯಾಗಿದೆ. ಕಡೇನಂದಿಹಳ್ಳಿ ಗ್ರಾ, ಜಯಾನಂದ ಇವರ 0.18 ಹೆ. ಶುಂಠಿ ಬೆಳೆ ಹಾಗೂ 0.08 ಹೆ. ಶುಂಠಿ ಬೆಳೆ ಹಾನಿಯಾಗಿದೆ. ಮದಗಹಾರನಹಳ್ಳಿ ಗ್ರಾಂ.ಪಂ, ಮದಗಹಾರನಹಳ್ಳಿ ಗ್ರಾ, ಸಿದ್ದನಗೌಡ ಇವರ 0.50 ಹೆ. ಬಾಳೆ ಮತ್ತು 0.25 ಹೆ. ಬಾಳೆ ಬೆಳೆ ಹಾನಿಯಾಗಿದೆ. ದಿಂಡದಹಳ್ಳಿ ಗ್ರಾಂ.ಪಂ. ಕಿಟ್ಟದಹಳ್ಳಿ ಗ್ರಾ, ಕೊಲ್ಲಮ್ಮ, ಗಣೇಶಪ್ಪ, ನಾಗಪ್ಪ, ಮಂಜಮ್ಮ, ಸಂಜೀವಪ್ಪ ಮತ್ತು ದಾನಪ್ಪ ಇವರುಗಳ ಜಂಟಿಯಲ್ಲಿ 1.20 ಹೆ. ಶುಂಠಿ ಬೆಳೆ ಹಾನಿಯಾಗಿದೆ. ಬೇಗೂರು ಗ್ರಾಂ.ಪಂ, ದಬ್ಬಣ ಬೈರನಹಳ್ಳಿ ಗ್ರಾ, ಬಸವಗೌಡ 0.15 ಹೆ. ಶುಂಠಿ ಬೆಳೆ ಹಾನಿಯಾಗಿರುತ್ತದೆ ಎಂದು ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶರು ಪ್ರಕಡಣೆಯಲ್ಲಿ ತಿಳಿಸಿದಾರೆ.