Breaking
Mon. Dec 23rd, 2024

“ಜನ್ ಜಾತೀಯ ಗೌರವ ದಿವಸ್ : ಬಿರ್ಸಾ ಮುಂಡಾ ಅವರಿಗೆ ನಮನ” “ಬಿರ್ಸಾ ಮುಂಡಾ ಅವರ ಸಾಹಸ, ಧೈರ್ಯ, ನಾಯಕತ್ವ ಯುವಕರಿಗೆ ಸ್ಫೂರ್ತಿ : ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್”

ಬೆಂ.ಗ್ರಾ. :  ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡು ಬ್ರಿಟಿಷರ ವಸಹಾತುಶಾಹಿ ಶೋಷಣೆಯ ವಿರುದ್ಧ ಸಿಡಿದೆದ್ದು ಹೋರಾಡಿದರು. ಇಂದಿನ ಯುವ ಸಮೂಹಕ್ಕೆ ಅವರ ಧೈರ್ಯ, ನಾಯಕತ್ವ ಗುಣಗಳು ಸ್ಪೂರ್ತಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್ ಅವರು ಹೇಳಿದರು.

     ಬೆಂಗಳೂರು ಗ್ರಾಮಾಂತರ ಸಭಾಭವನದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿ ಪ್ರಯುಕ್ತ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಗೌರವ ಸಲ್ಲಿಸಿದರು.

     ನಂತರ ಅವರು ಮಾತನಾಡಿದರು 1890 ರ ವಯಸ್ಸಿನಲ್ಲಿ ಬಿರ್ಸಾ ಮುಂಡಾ ಅವರು 25 ನೇ ವಯಸ್ಸಿನಲ್ಲಿ ಬ್ರಿಟಿಷರ ಶೋಷಣೆಯ ವಿರುದ್ಧ ಹೋರಾಟ ಮಾಡಿದವರು. ಬ್ರಿಟಿಷ್ ಅಧಿಕಾರಿಗಳು ತಮ್ಮ ಬುಡಕಟ್ಟು ಜನಾಂಗದವರ ಮೇಲೆ ಶೋಷಣೆಗೆ ಮುಂದಾದಾಗ ಅವರ ಭೂಮಿ, ಆಚಾರ, ವಿಚಾರಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾಗ, ಅದರ ವಿರುದ್ಧ ಸಿಡಿದೆದ್ದು ತಮ್ಮ ಹಕ್ಕುಗಳಿಗೆ ಹೋರಾಡಲು ನಾಯಕತ್ವ ವಹಿಸಿಕೊಂಡು ಹೋರಾಡಿದರು. ಇಲ್ಲ ಅವರ ಜನ್ಮದಿನವನ್ನು ಸ್ಮರಣಾರ್ಥ ”ಜನ್ ಜಾತಿಯ ಗೌರವ್ ದಿವಸ್” ಎಂದು ಆಚರಿಸುವುದಿಲ್ಲ. ಇತಿಹಾಸದಲ್ಲಿ ಅವರ ಧೈರ್ಯ, ಸಾಹಸ ಮತ್ತು ನಾಯಕತ್ವದ ಗುಣಗಳು ಯುವಕರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

     ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪಾಂಡುರಂಗ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ರಾಜೀವ್ ಸುಲೋಚನ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು .

Related Post

Leave a Reply

Your email address will not be published. Required fields are marked *