ಶಿವಮೊಗ್ಗ : ಕೆ,ಎಸ್,ಅರ್,ಟಿ,ಸಿ ಶಿವಮೊಗ್ಗ ವಿಭಾಗವು ನ. 15 ರಂದು ಕೆ.ಎಸ್. ಅರ್. ಟಿ.ಸಿ. ಡಿಪೋದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಾಯು ಮಾಲಿನ್ಯ ನಿಯಂತ್ರಣದಲ್ಲಿ ಉತ್ತಮ ನಿರ್ವಹಣೆ ತೋರಿದ 10 ಜನ ವಾಹನ ಚಾಲಕರನ್ನು ಸನ್ಮಾನಿಸಲಾಯಿತು
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಭೀಮನ ಗೌಡ ಪಾಟೀಲ್, ಕೆ.ಎಸ್. ಅರ್. ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ನವೀನ ಕುಮಾರ್, ಡಿ.ಟಿ.ಒ ದಿನೇಶ್ ಚನ್ನಗಿರಿ, ಡಿಪೋ ಮ್ಯಾನೇಜರ್ ಎಂ. ರಾಮಚಂದ್ರಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ ಬಿ. ಶಿರೋಲ್ಕರ್, ಹಿ. ಮೋ. ವಾ ನಿ. ಪಿ.ಎಂ. ಮಲ್ಲೇಶಪ್ಪ, ಕಚೇರಿ ಅಧೀಕ್ಷಕರುಗಳಾದ ರಾಮಚಂದ್ರಪ್ಪ ಎಚ್. ಸಿ., ಶ್ರೀಮತಿ ರಮ್ಯಾ, ವಿಷಯ ನಿರ್ವಾಹಕರಾದ ಡಿ.ಮೋಹನ್ ಕುಮಾರ್, ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಕೆ,ಎಸ್,ಆರ್,ಟಿ,ಸಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು