Breaking
Mon. Dec 23rd, 2024

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಯುವ ಜನರಿಗೆ ಅನುಷ್ಠಾನಗೊಳಿಸಲಿರುವ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ……!

ಚಿತ್ರದುರ್ಗ : 2024-25ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಯುವ ಜನರಿಗೆ ಅನುಷ್ಠಾನಗೊಳಿಸಲಿರುವ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನ.

ಯುವ ಜನರನ್ನು ಸ್ವಾವಲಂಬಿಯಾಗಲು ಉತ್ತೇಜಿಸುವ ದೃಷ್ಠಿಯಿಂದ ಹೊಲಿಗೆ ತರಬೇತಿ ಶಿಬಿರ, ಜಿಮ್ ಫಿಟ್ನೆಸ್ ಮತ್ತು ವಿಡಿಯೋಗ್ರಾಫಿ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.

ಎಸ್‍ಎಸ್‍ಎಲ್‍ಸಿ ಪಾಸ್ ಅಥವಾ ಫೇಲ್ ಆದ 18 ರಿಂದ 40 ವರ್ಷ ವಯೋಮಿತಿಯವರಿಗೆ 2024ರ ನವೆಂಬರ್ 28 ರಿಂದ ಡಿಸೆಂಬರ್ 17 ರವರೆಗೆ 20 ದಿನಗಳ ಕಾಲ ಹೊಲಿಗೆ ತರಬೇತಿ ಶಿಬಿರವು ಬೆಂಗಳೂರಿನ ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ತರಬೇತಿ ನಡೆಯಲಿದೆ.

ದ್ವಿತೀಯ ಪಿಯು ಪಾಸ್ ಅಥವಾ ಫೇಲ್ ಆದ 18 ರಿಂದ 40 ವರ್ಷ ವಯೋಮಿತಿಯವರಿಗೆ 2024ರ ಡಿಸೆಂಬರ್ 06 ರಿಂದ ಡಿಸೆಂಬರ್ 17 ರವರೆಗೆ 12 ದಿನಗಳ ವರರೆಗೆ ವೀಡಿಯೋಗ್ರಫಿ ತರಬೇತಿ ಶಿಬಿರವು ಬೆಂಗಳೂರಿನ ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ತರಬೇತಿ ನಡೆಯಲಿದೆ.

ದ್ವಿತೀಯ ಪಿಯುಸಿ ಪಾಸ್ ಅಥವಾ ಫೇಲ್ ಆದ 18 ರಿಂದ 40 ವರ್ಷ ವಯೋಮಿತಿಯರಿಗೆ 2024ರ ಡಿಸೆಂಬರ್ 03 ರಿಂದ 17 ರವರೆಗೆ ಜಿಮ್ ಫಿಟ್ನೆಸ್ ತರಬೇತಿಯು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ತರಬೇತಿ ಶಿಬಿರಗಳಿಗೆ ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿಯ ಯುವ ಜನರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಿಂದ ಅರ್ಜಿ ಪಡೆದು ಇದೇ ನವೆಂಬರ್ 25 ರೊಳಗೆ ಕಚೇರಿಗೆ ಸಲ್ಲಿಸಬೇಕು.

ತರಬೇತಿ ಶಿಬಿರಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಊಟೋಪಹಾರ, ಪ್ರಮಾಣ ಪತ್ರ ಹಾಗೂ ಈ ಶಿಬಿರದಲ್ಲಿ ಭಾಗವಹಿಸುವ ಯುವತಿಯರಿಗೆ ಸಾಮಾನ್ಯ ವಸತಿ ವ್ಯವಸ್ಥೆ ಇರುತ್ತದೆ.

  ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08194-235635 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *