ಚಿತ್ರದುರ್ಗ-ಬಾಲೇನಹಳ್ಳಿ ರೈಲ್ವೆ ಹಳಿಯ ಲೆವಲ್ ಕ್ರಾಸಿಂಗ್ ಮತ್ತು ನವೀಕರಣ ಕಾರ್ಯದ ನಿಮಿತ್ತ ನ.19ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚಿತ್ರದುರ್ಗ-ಜೋಡಿಚಿಕ್ಕೇನಹಳ್ಳಿ ರೈಲ್ವೆ ಗೇಟ್ ಮುಚ್ಚಲಾಗುತ್ತದೆ.
ರಸ್ತೆ ಸಂಚಾರಿಗಳ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಲಘು ವಾಹನ ಸವಾರರು ಚಿತ್ರದುರ್ಗ, ಹಳೇಕಲ್ಲಹಳ್ಳಿ, ಜೋಡಿ ಚಿಕ್ಕೇನಹಳ್ಳಿ, ಎಣ್ಣೆಗೆರೆ ಮಾರ್ಗವಾಗಿ ಹಾಗೂ ಬಾರಿ ವಾಹನ ಸವಾರರು ಚಿತ್ರದುರ್ಗ ದೊಡ್ಡಸಿದ್ದವನಹಳ್ಳಿ, ಎಣ್ಣೆಗೆರೆ, ಜೋಡಿಚಿಕ್ಕೇನಹಳ್ಳಿ ಮಾರ್ಗದ ರಸ್ತೆಗಳಲ್ಲಿ ಸಂಚರಿಸುವಂತೆ ಚಿತ್ರದುರ್ಗ ರೈಲ್ವೇ ವಿಭಾಗದ ಹಿರಿಯ ವಿಭಾಗೀಯ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.