ಬೆಂಗಳೂರಿನ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಮಹಿಳೆಯೊಬ್ಬರು ಶೋ ರೂಂನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನಂಬಲಾಗಿದೆ. ಬೆಂಗಳೂರು, (ನವೆಂಬರ್ 19): ಬೆಂಗಳೂರಿನ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಾಜ್‌ಕುಮಾರ್ ರಸ್ತೆಯಲ್ಲಿರುವ ಮೈ ಇವಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಶೋರೂಂ ಬೆಂಕಿಗಾಹುತಿಯಾಗಿದೆ. ಶೋರೂಂನಲ್ಲಿ ಸಿಲುಕಿದ್ದ ಯುವತಿ ಸುಟ್ಟು ಕರಕಲಾಗಿದ್ದು, ಶೋರೂಂನಲ್ಲಿ ಸೇಲ್ಸ್ ವುಮನ್ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾ (20) ಎಂಬ ಯುವತಿ ಬೆಂಕಿಗೆ ಆಹುತಿಯಾಗಿದ್ದಾರೆ.
ಸ್ಕೂಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಡೀಲರ್‌ಶಿಪ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಡೀಲರ್‌ಶಿಪ್ ಬೆಂಕಿಗಾಹುತಿಯಾಗಿದೆ. ಎಕ್ಸಿಬಿಷನ್ ಹಾಲ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ಗಳು ಭೀಕರ ಬೆಂಕಿಯಲ್ಲಿ ನಾಶವಾಗಿವೆ.
ನೋಡ ನೋಡುತ್ತಿದ್ದಂತೆಯೇ ಬೆಂಕಿ ತೀವ್ರಗೊಂಡಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಶೋರೂಂನಲ್ಲಿದ್ದ 20 ವರ್ಷದ ಸೇಲ್ಸ್ ವುಮನ್ ಪ್ರಿಯಾ ಹೊರಡುವ ಮುನ್ನವೇ ಸುಟ್ಟು ಕರಕಲಾಗಿದ್ದಾಳೆ. ಕಾರ್ ಡೀಲರ್ ಶಿಪ್ ನಲ್ಲಿ 45 ಸ್ಕೂಟರ್ ಗಳು ಬೆಂಕಿಗೆ ಆಹುತಿಯಾಗಿರುವುದು ಗೊತ್ತಾಗಿದೆ.