ಚಿತ್ರದುರ್ಗ : ತಪ್ಪದೇ ನಿಮ್ಮ ಮಕ್ಕಳಿಗೆ ಪಿಸಿವಿ ಲಸಿಕೆ ಹಾಕಿ ನ್ಯೂಮೋನಿಯಾ ನಿಯಂತ್ರಿಸಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ತಿಳಿಸಿದರು.
ನಗರದ ಮಾರುತಿ ನಗರದ ಕೇಂದ್ರ ವ್ಯಾಪ್ತಿಯ ಜೆ.ಸಿ.ಆರ್ ಬಡಾವಣೆ 7ನೇ ಅಡ್ಡರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರದ ಲಸಿಕಾದೊಂದಿಗೆ ಆರೋಗ್ಯ ನಗರ ಆರೋಗ್ಯ ಕಾರ್ಯಕ್ರಮ ಸಾಮಾಜಿಕ ಅರಿವು ಚಟುವಟಿಕೆಗಳ ಮೂಲಕ ನಿಮೋನಿಯಾ ರೋಗ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.
ನ್ಯೂಮೋನಿಯಾ ಸೋಂಕು, ವೈರಲ್ ಅಥವಾ ಫಂಗಲ್ ಸೋಂಕಿನಿಂದ ನಿಮ್ಮ ಶ್ವಾಸಕೋಶದಲ್ಲಿ ಉರಿಯೂತ ಮತ್ತು ದ್ರವವಾಗಿದೆ. ಇದು ಉಸಿರಾಡಲು ಕಷ್ಟವಾಗುತ್ತದೆ ಮತ್ತು ಹಳದಿ, ಹಸಿರು ಅಥವಾ ರಕ್ತಸಿಕ್ತ ಲೋಳೆಯೊಂದಿಗೆ ಜ್ವರ ಮತ್ತು ಕೆಮ್ಮು ಉಂಟುಮಾಡಬಹುದು. ಫ್ಲೂ, ಕೋವಿಡ್-19 ಮತ್ತು ನ್ಯುಮೋಕೊಕಲ್ ಕಾಯಿಲೆಗಳು ನ್ಯುಮೋನಿಯಾಕ್ಕೆ ಸಾಮಾನ್ಯ ಕಾರಣ ಎಂದು ಸಂಭವಿಸಿದೆ.
ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಪ್ರತಿ ವರ್ಷ ನವೆಂಬರ್ 14 ರಂದು ವಿಶ್ವ ನಿಮೋನಿಯಾ ದಿನ ಆಚರಿಸುವುದಿಲ್ಲ. ಈ ಬಾರಿ ಈ ಕಾರ್ಯಕ್ರಮ ಸಾನ್ಸ್ ಕಾರ್ಯಕ್ರಮ ಸಾಮಾಜಿಕ ಅರಿವು ಚಟುವಟಿಕೆಗಳ ಮೂಲಕ ನ್ಯೂಮೋನಿಯಾ ರೋಗ ನಿಯಂತ್ರಿಸುತ್ತದೆ ಎಂದಾಗಿದೆ
ಸಾರ್ವಜನಿಕರು ಮಕ್ಕಳಿಗೆ ಉಸಿರು ಗಟ್ಟಿಯಾಗಿ ಪಕ್ಕಕ್ಕೆ ಸೆಳೆತ ಗಮನಿಸಬೇಕು ಇಂತಹ ಸ್ಥಿತಿ ಕಂಡು ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಬಳಿ ಚಿಕಿತ್ಸೆ ಪಡೆಯಬೇಕು. ನಿಮೋನಿಯಾ ರೋಗವು ಸಾಮಾನ್ಯವಾಗಿ ಬರಲು ಕಾರಣವಾದ ವಾಯುಮಾಲಿನ್ಯ ಪರಿಸರ ಮಾಲಿನ್ಯ ಅಪೌಷ್ಟಿಕತೆ. ಯಾವುದೇ ಚಳಿ ಮತ್ತು ಮಳೆಗಾಲಗಳಲ್ಲಿ ತಾಯಂದಿರು ಬೆಚ್ಚಗೆ ಇರಿಸಿಕೊಳ್ಳಬೇಕು. ಜೊತೆಗೆ ಫ್ರಿಜ್ಜಿನಲ್ಲಿರುವ ಆಹಾರಗಳನ್ನು ಸೇವಿಸಬಾರದು ಎಂದು ಗಾಳಿಯಲ್ಲಿ ಸೇವಿಸಿದಾಗ ಶ್ವಾಸಕೋಶದ ಸೋಂಕು ತಗಲುತ್ತದೆ ಎಂದು ತಿಳಿಸಿದ ಅವರು ಹೆಚ್ಚು ಸಾಮಾಜಿಕ ಅರಿವು ಚಟುವಟಿಕೆಗಳ ಮೂಲಕ ನ್ಯೂಮೋನಿಯಾ ರೋಗವನ್ನು ನಿಯಂತ್ರಿಸುತ್ತಾರೆ.
ಮಾರುತಿ ನಗರ ನಗರ ಆರೋಗ್ಯ ಕೇಂದ್ರದ ಡಾ.ಯಶಸ್ ಅವರು ಪಕ್ಕಲಬು ಸೆಳೆತದ ಪ್ರಾತ್ಯಕ್ಷಿಕೆ ತೋರಿಸಿದರು.
ಕಾರ್ಯಕ್ರಮದಲ್ಲಿ ಮಾರುತಿ ನಗರ ನಗರ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ತಿಪ್ಪಮ್ಮ, ಕಾತ್ಯಾಯನಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರವೀಣ್ ಕುಮಾರ್, ನಂದೀಶ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ರೂಪ ತಾಯಂದಿರು, ಮಕ್ಕಳು, ಅತ್ತೆಯರು ಇದ್ದರು.