ಕನ್ನಡತಿ ಶ್ರೀಲೀಲಾ ಹಾಗೂ ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಅವರ ಹಾಡು ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇದಕ್ಕೂ ಮುನ್ನ ಪ್ರೊಡಕ್ಷನ್ ತಂಡ ಪುಷ್ಪ 2 ಹಾಡಿನ ಪ್ರೋಮೋ ಬಿಡುಗಡೆ ಮಾಡಿತ್ತು.
ಶ್ರೀಲೀಲಾ ಅವರ ವಿಶೇಷ ಹಾಡು ನವೆಂಬರ್ 24 ರಂದು ಸಂಜೆ 7:02 ಕ್ಕೆ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ತಂಡ ಈಗಾಗಲೇ ಘೋಷಿಸಿದೆ. ನಿರ್ಮಾಣ ತಂಡ ಹಾಡಿನ ಸಣ್ಣ ಭಾಗವನ್ನು ಬಿಡುಗಡೆ ಮಾಡಿದ್ದು, ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದೆ.
“ಕಿಸ್ ಕಿಸ್ ಕಿಸ್ಸಿಕ್” ಹಾಡು ಈಗ ಹುಡುಗರನ್ನು ರೋಮಾಂಚನಗೊಳಿಸಿದೆ. ಹಾಡಿನ ಪೂರ್ಣ ಆವೃತ್ತಿಯನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅಂದಹಾಗೆ, ಪುಷ್ಪ 2 ಚಿತ್ರ ಡಿಸೆಂಬರ್ 5 ರಂದು ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ, ಫಹದ್ ಫಾಸಿಲ್, ಅನಸೂಯಾ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದಾರೆ.