ಚಿತ್ರದುರ್ಗ ನಗರದ ಹೊರಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಜಿಲ್ಲೆಯ ಉರ್ದು ಪ್ರಾಥಮಿಕ ಪಾಠಶಾಲಾ ಶಿಕ್ಷಕರ 6 ರಿಂದ 8ನೇ ತರಗತಿ ಬೋಧಿಸುತ್ತಿರುವ ವಿಷಯವಾರು ಶಿಕ್ಷಕರಿಗೆ ಐದು ದಿನದ ವೃತ್ತಿಪರ ಬುನಾದಿ ತರಬೇತಿ ನಡೆಯಿತು.
ಡಿಎಸ್‍ಇಆರ್ ಹಾಗೂ ಡಯಟ್ ವತಿಯಿಂದ ನ.19 ರಿಂದ 23 ರವರೆಗೆ ತರಬೇತಿ ನಡೆಯಲಿದ್ದು, ಜಿಲ್ಲೆಯ ಆರು ತಾಲ್ಲೂಕಿನ ಸುಮಾರು 50 ಶಿಕ್ಷಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಶಿಕ್ಷಕರು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ, ಕಲಿಕಾ ಫಲಗಳ ಮಹತ್ವ, ಬುನಾದಿ ಸಾಮಥ್ರ್ಯಗಳು ಭಾಷೆ ಹಾಗೂ ಗಣಿತ ವಿಷಯದ ಬಗ್ಗ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು.
ಸರ್ಕಾರಿ ಶಾಲೆಗೆ ಬರುವ ಮಕ್ಕಳು ಬಹಳಷ್ಟು ಬಡವರ ಮಕ್ಕಳಾಗಿದ್ದು, ಅವರಿಗೆ ಉತ್ತಮ ನೈತಿಕ ಮೌಲ್ಯಗಳನ್ನು ಕಲಿಸಬೇಕು. ಭವಿಷ್ಯದಲ್ಲಿ ಉತ್ತಮ ಪ್ರಜೆ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದ ಅವರು, ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಿಸಲು 6ನೇ ತರಗತಿಯಿಂದಲೇ ಶ್ರಮಿಸಬೇಕು ಎಂದು ತಿಳಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ನೋಡಲ್ ಅಧಿಕಾರಿ ಸೈಯದ ಸಮೀರ, ಸಿಆರ್‍ಪಿ ಜಾಕೀರ್ ಹಾಗೂ ಮುಹಿಬಹಲ್ಲ ತಬ್ಬರಿಸಿ ಪರ್ವಿನ್ ಆಯಿಷ, ಸಂಪನ್ಮೂಲ ವ್ಯಕ್ತಿಗಳು ಇದ್ದರು.