ಶಿವಮೊಗ್ಗ : ದಿನಾಂಕ 23 11:2024ರ ಶನಿವಾರ ಮಂಗಳೂರಿನ ಶಕ್ತಿ ರೆಸಿಡೆನ್ಷಿಯಲ್ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಿವಮೊಗ್ಗದ ಎಸ್ ರಾಮಯ್ಯ ಸರ್ವೋದಯ ಬಾಲಿಕಾ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಹೇಮಾ ಕೆಎಂ ,ಇವರು ಶಿಕ್ಷಕರ ವಿಭಾಗದಿಂದ ಸ್ಪರ್ಧಿಸಿ ತೃತೀಯ ಬಹುಮಾನವನ್ನು ಪಡೆದು ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ .
ಹಾಗೆಯೇ ರಾಮಕೃಷ್ಣ ಪ್ರೌಢಶಾಲೆ ಗೋಪಾಳ, ಶಿವಮೊಗ್ಗ. ವಿದ್ಯಾರ್ಥಿಗಳಾದ ಪ್ರೀತಮ್ ಎಂ. ಎಸ್. ಮತ್ತು ಚಿರಂತನ್ ಟಿ. ಎಸ್. ಹಾಗೂ ಸಾಗರದ ಸೇವಾ ಸಾಗರ್ ಪ್ರೌಢಶಾಲೆಯ ಅಭಿನಂದನ್ ಆರ್. ಕೆ. ವಿದ್ಯಾರ್ಥಿಗಳು ವೈಯಕ್ತಿಕ ಮತ್ತು ಗುಂಪು ವಿಭಾಗದಲ್ಲಿ ಆಯ್ಕೆಯಾಗಿದ್ದು, ಜನವರಿ 21 ರಿಂದ ಪಾಂಡಿಚೆರಿಯಲ್ಲಿ ನಡೆಯುವ ದಕ್ಷಿಣ ವಲಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಾರೆ.