ಬ್ರಹ್ಮಗಂಟು ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ನಿನ್ನೆ (ನವೆಂಬರ್ 30) ಹೈದರಾಬಾದ್‌ನಲ್ಲಿ ನಡೆದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಎರಡು ವರ್ಷಗಳ ಹಿಂದೆ ಹಾಸನ ಮೂಲದ ಶೋಭಿತಾ ಮದುವೆಯಾಗಿ ಹೈದರಾಬಾದ್‌ನಲ್ಲಿ ನೆಲೆಸಿದ್ದರು. ಬಣ್ಣದ ಲೋಕದಿಂದ ದೂರವೇ ಉಳಿದರು. ಇದೀಗ ಶೋಭಿತಾ ಆತ್ಮಹತ್ಯೆ ಸುದ್ದಿ ಮನೆಯವರನ್ನು ಬೆಚ್ಚಿ ಬೀಳಿಸಿದೆ. ಆದರೆ ಮರಣೋತ್ತರ ಪರೀಕ್ಷೆ ಬಳಿಕ ನಟಿಯ ಶವವನ್ನು ಬೆಂಗಳೂರಿಗೆ ಕೊಂಡೊಯ್ಯುವ ಸಾಧ್ಯತೆ ಇದೆ.
ಆತ್ಮಹತ್ಯೆಗೂ ಮುನ್ನ ನಟಿ ನಗುತ್ತಿರುವ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯ ನಂತರ ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಶೋಭಿತಾ ಫಸ್ಟ್ ಡೇ, ಫಸ್ಟ್ ಶೋ ಚಿತ್ರದಲ್ಲಿ ನಟಿಸಿದ್ದರು. ಜನಪ್ರಿಯ ಟಿವಿ ಸರಣಿ ಬ್ರಹ್ಮಗಂಟು ಸೇರಿದಂತೆ ಅನೇಕ ಟಿವಿ ಸರಣಿಗಳಲ್ಲಿ ನಟಿ ನಟಿಸಿದ್ದಾರೆ.