Breaking
Mon. Dec 23rd, 2024

ಕುರಿ, ಮೇಕೆ ಘಟಕ ಪೂರೈಕೆ ಯೋಜನೆ: ಪರಿಶಿಷ್ಟ ಪಂಗಡದ ಸದಸ್ಯರಿಂದ ಅರ್ಜಿ ಆಹ್ವಾನ….!

ಚಿತ್ರದುರ್ಗ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ 2024-25 ನೇ ಸಾಲಿನ ಗಿರಿಜನ ಉಪಯೋಜನೆ ಅಡಿಯಲ್ಲಿ ಕುರಿ, ಮೇಕೆ ಘಟಕ ಪೂರೈಕೆ ಯೋಜನೆ ನಿಗಮದಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ ಸದಸ್ಯರಿಗಾಗಿ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಡಿ.15 ಅರ್ಜಿ ಸಲ್ಲಿಸಲು ಕೊನೆಯ ದಿನ.

ಅರ್ಜಿ ಸಲ್ಲಿಸುವವರು 18 ರಿಂದ 60 ವರ್ಷ ಒಳಗಿನ ಮಹಿಳಾ, ಪುರುಷ ಸದಸ್ಯರಾಗಿದ್ದರೆ, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಮೂಲಕ ಅರ್ಜಿ ಸಲ್ಲಿಸಿ.

ಈ ಯೋಜನೆಡಿ 10 ಸುಧಾರಿತ ಹೆಣ್ಣು ಕುರಿ, ಮೇಕೆ, 01 ಟಗರು, ಹೋತಕ್ಕೆ ಒಟ್ಟು ಘಟಕ ದರ ರೂ.66,000/-ಗಳಿದ್ದು, ಶೇ.90 ಸಹಾಯಧನ ಲಾಭಾಂಶ. ಚಿತ್ರದುರ್ಗ ಜಿಲ್ಲೆಗೆ ಒಟ್ಟು 14 ಗುರಿ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಅಥವಾ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಪಶು ಆಸ್ಪತ್ರೆ ಆವರಣ, ಚಿತ್ರದುರ್ಗ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ಸಂಘದುರ್ಗ.

Related Post

Leave a Reply

Your email address will not be published. Required fields are marked *