Breaking
Mon. Dec 23rd, 2024

ಚಿತ್ರದುರ್ಗ ನಗರಸಭೆ: ನಗರದಲ್ಲಿ ಡಿ.05, 06 ಮತ್ತು 07ರಂದು ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಚಿತ್ರದುರ್ಗ
ಇದೇ  ತಿಂಗಳು ಡಿಸೆಂಬರ್ ನಲ್ಲಿ 05, 06 ಹಾಗೂ 07ರಂದು ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹಾಗೂ ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ಅವರು ಚಿತ್ರದುರ್ಗ ನಗರಸಭೆಯ ವ್ಯಾಪ್ತಿಯಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಕಸ ವಿಲೇವಾರಿ ವಾಹನಗಳ ಉದ್ಘಾಟನೆ ನೆರವೇರಿಸುವರು.
ಡಿ.05ರಂದು ಸಂಜೆ 4ಕ್ಕೆ ನಗಸಭೆ ಸಭಾಂಗಣದಲ್ಲಿ ಎಸ್‍ಎಫ್‍ಸಿ ಹಾಗೂ ನಗರಸಭೆ ನಿಧಿಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ, ಹೊಸದಾಗಿ ಖರೀದಿಸಿರುವ ಕಸ ಸಂಗ್ರಹಣೆ ವಾಹನಗಳ ಉದ್ಘಾಟನೆ ಹಾಗೂ ಸರ್ಕಾರಿ ಬಾಲಕಿಯರ ಕಾಲೇಜ್ ಪಕ್ಕದ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸುವರು.
ಡಿ.06 ಮತ್ತು 07ರಂದು ಬೆಳಿಗ್ಗೆ 10.30 ರಿಂದ 5 ರವರೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಮಂಜೂರಾದ ರೂ.7.50 ಕೋಟಿಗಳ ಅನುದಾನದಲ್ಲಿ ತೆಗೆದುಕೊಂಡಿರುವ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುವರು.
ಡಿ.06ರಂದು ಉದ್ಘಾಟಿಸಲಿರುವ ಕಾಮಗಾರಿಗಳ ವಿವರ ಇಂತಿದೆ. ವಾರ್ಡ್ ನಂ.32ರ ಐಯುಡಿಪಿ ಲೇಔಟ್‍ನಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಆರ್.ಸಿ.ಸಿ.ಡೆಕ್ ಸ್ಲಾಬ್ ಹಾಗೂ ಸಿ.ಸಿ. ಚರಂಡಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.33ರ ಬುದ್ಧನಗರದ 4, 5ನೇ ಕ್ರಾಸ್‍ನಲ್ಲಿ ರೂ.30 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.1ರ ಮೈಲಮ್ಮ ದೇವಸ್ಥಾನ ಸಮೀಪ ರೂ.30 ಲಕ್ಷದಲ್ಲಿ ಸಿ.ಸಿ.ಚರಂಡಿ, ಡೆಕ್ ಸ್ಲಾಬ್ ಹಾಗೂ ಒಳಚರಂಡಿ ಕಾಮಗಾರಿ, ವಾರ್ಡ್ ನಂ.4ರ ಫಿಲ್ಟರ್ ಹೌಸ್ ಹತ್ತಿರ ರೂ.30 ಲಕ್ಷ ವೆಚ್ಚದಲ್ಲಿ ಸಿ.ಸಿ.ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ, ವಾರ್ಡ್ ನಂ.2ರ ಅಕ್ಕಚ್ಚಮ್ಮ ಬಾವಿ ಅಂಜುಮಾನ್ ಮುಂಭಾಗದಲ್ಲಿ ರೂ.10 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ, ಚರಂಡಿ, ಒಳಚರಂಡಿ, ಆರ್.ಸಿ.ಸಿ ಸ್ಲಾಬ್ ಹಾಗೂ ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿ, ವಾರ್ಡ್‍ನಂ 3ರ ಕಾಮನಭಾವಿ ಬಡಾವಣೆಯಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಅಂಜುಮಾನ್ ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿ, ವಾರ್ಡ್ ನಂ.6ರ ಅಲಿಮೊಹಲ್ಲಾದಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಒಳಚರಂಡಿ, ಹ್ಯಾಂಡ್ ರೈಲ್ಲಿಂಗ್ ಹಾಕುವುದು ಹಾಗೂ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ, ವಾರ್ಡ್ ನಂ.7ರ ಬುರುಜನಹಟ್ಟಿಯಲ್ಲಿ ರೂ.20 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ಹಾಗೂ ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿ, ವಾರ್ಡ್ ನಂ.8ರ ಸಿಹಿನೀರು ಹೊಂಡದ ರಸ್ತೆಯ ಸಮೀಪದಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ, ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿ, ವಾರ್ಡ್ ನಂ.10ರ ಚೇಳುಗುಡ್ಡದಲ್ಲಿ ರೂ.30 ಲಕ್ಷದಲ್ಲಿ ಸಿ.ಸಿ.ರಸ್ತೆ ಕಾಮಗಾರಿ, ವಾರ್ಡ್ ನಂ.13 ನೆಹರು ನಗರದಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಹಾಗೂ ಪೈಪ್‍ಲೈನ್ ಕಾಮಗಾರಿ, ವಾರ್ಡ್ ನಂ.15ರ ಸಂಪಿಗೆ ಸ್ಕೂಲ್ ಪಕ್ಕದ ಹಾಗೂ ಬರಗೇರಿ ಬೀದಿ ಗಲ್ಲಿಗಳಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವರು.
ಡಿ.07ರಂದು ವಾರ್ಡ್ ನಂ.28ರ ತುರುವನೂರು ರಸ್ತೆಯ ವಾಸವಿ ಲ್ಯಾಬ್ ಸಮೀಪದಿಂದ ರೂ.30 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿ, ವಾರ್ಡ್ ನಂ.26ರ ಬಡಮಕಾನ್ ಸಮೀಪದಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿ, ವಾರ್ಡ್ ನಂ.25ರ ಜೆ.ಜೆ.ಹಟ್ಟಿಯಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ಸಿ.ಸಿರಸ್ತೆ ನಿರ್ಮಾಣ ಕಾಮಗಾರಿ, ವಾರ್ಡ್ ನಂ.21ರ ಜೆ.ಸಿ.ಆರ್. ಬಡಾವಣೆ 5ನೇ ಕ್ರಾಸ್‍ನಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ಸಿ.ಸಿ ಚರಂಡಿ ನಿರ್ಮಾಣ ಹಾಗೂ ಡೆಕ್ ಸ್ಲಾಬ್ ಕಾಮಗಾರಿ, ವಾರ್ಡ್ ನಂ.18ರ ಮೆದೇಹಳ್ಳಿ ರಸ್ತೆಯ ರಾ.ಹೆ-4ರ ಸರ್ವೀಸ್ ರಸ್ತೆಯ ಸಮೀಪದಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಆರ್‍ಸಿಸಿ, ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿ, ವಾರ್ಡ್ ನಂ.17ರ ಜಯಲಕ್ಷ್ಮೀ ಬಡಾವಣೆ ಸಮೀಪದಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. 2024-25ನೇ ಸಾಲಿನ ಎಸ್‍ಎಫ್‍ಸಿ ಮುಕ್ತ ಅನುದಾನದಲ್ಲಿ ಚಿತ್ರದುರ್ಗ ನಗರದ ಯೂನಿಯನ್ ಪಾರ್ಕ್ ಪಕ್ಕದ ರಸ್ತೆಯಲ್ಲಿ ರೂ.30.95 ಲಕ್ಷ ವೆಚ್ಚದಲ್ಲಿ ದೊಡ್ಡ ಮಳೆ ನೀರು ಚರಂಡಿ ಮತ್ತು ಕಲ್ವರ್ಟ್ ನಿರ್ಮಾಣ ಕಾಮಗಾರಿಗೆ ಚಾಲನೆ ಹಾಗೂ ನಗರಸಭೆ ನಿಧಿಯ ಶೇ.24.10ರ ಅನುದಾನದಲ್ಲಿ ಚಿತ್ರದುರ್ಗ ನಗರದ ಯೂನಿಯನ್ ಪಂಪ್ ಹೌಸ್ ಆವರಣದಲ್ಲಿ ರೂ.22 ಲಕ್ಷ ವೆಚ್ಚದಲ್ಲಿ ಪೌರ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ನಗರಸಭ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *