Breaking
Mon. Dec 23rd, 2024

ಗಣಿಭಾದಿತ ಪ್ರದೇಶದ ಜನರಿಗೆ ಉಚಿತ ಆರೋಗ್ಯ ಸೇವೆ ಗಣಿಭಾದಿತ ಪ್ರದೇಶಗಳಲ್ಲಿ ಸಂಚಾರಿ ಆರೋಗ್ಯ ಘಟಕ ಸಂಚಾರ….!

ಚಿತ್ರದುರ್ಗ :  ತಾಲ್ಲೂಕಿನ ಗಣಿಭಾದಿತ ಪ್ರದೇಶಗಳಲ್ಲಿನ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಸಂಚಾರಿ ಆರೋಗ್ಯ ಘಟಕ ಸಂಚರಿಸಲಿದೆ.

ಗಣಿಭಾದಿತ ಪ್ರದೇಶಗಳಲ್ಲಿ ಸಂಚಾರ ಮಾಡುವ ಸಂಚಾರಿ ಆರೋಗ್ಯ ಘಟಕ ಪ್ರತಿ ದಿನದ ವೇಳಾಪಟ್ಟಿ ಅನ್ವಯ ಚಿತ್ರದುರ್ಗ ನಗರದಿಂದ ಹೊರಡಲಿದ್ದು, ಗಣಿಭಾದಿತ ಪ್ರದೇಶದ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ಸೇವೆ ನೀಡಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ.

ಸಂಚಾರಿ ಆರೋಗ್ಯ ಘಟಕದಲ್ಲಿ ವೈದ್ಯರು, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಔಷಧಿ ವಿತರಕರು ಕಾರ್ಯನಿರ್ವಹಿಸಲಿದ್ದು, ಸುಸಜ್ಜಿತ ವಾಹನ, ಆರೋಗ್ಯ ಉಪಕರಣಗಳು, ಔಷಧಿಗಳು ಲಭ್ಯ ಇರಲಿವೆ.

ಸಂಚಾರಿ ಆರೋಗ್ಯ ಘಟಕ ಒಂದು ವೇಳೆ ವೇಳಾಪಟ್ಟಿ ಪ್ರಕಾರ ಹಳ್ಳಿಗೆ ಬಾರದ ಇದ್ದ ಪಕ್ಷದಲ್ಲಿ ಹಾಗೂ ಯಾವುದೇ ಸಿಬ್ಬಂದಿಗಳು ಹಣ ಕೇಳಿದ್ದಲ್ಲಿ ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿಗಳ ದೂರವಾಣಿ ಸಂಖ್ಯೆ 9448923532 ಗೆ ಕರೆ ಮಾಡಿ ತಿಳಿಸಲು ಸೂಚಿಸಿದೆ.

ಸಂಚಾರಿ ಆರೋಗ್ಯ ಘಟಕದ ವೇಳಾಪಟ್ಟಿ: ಮೊದಲನೇ ವಾರ: ಸೋಮವಾರ ಬೆಳಿಗ್ಗೆ 10 ರಿಂದ 1 ರವರೆಗೆ ಕುರುಬರಹಳ್ಳಿ, ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ತಿರುಮಲಾಪುರ, ಮಂಗಳವಾರ ಬೆಳಿಗ್ಗೆ 10 ರಿಂದ 1 ರವರೆಗೆ ತುರೆಬೈಲು, ಮಧ್ಯಾಹ್ನ 2 ರಿಂದ 5 ರವರೆಗೆ ಬೊಮ್ಮೇನಹಳ್ಳಿ, ಬುಧವಾರ ಬೆಳಿಗ್ಗೆ 10 ರಿಂದ 1 ರವರೆಗೆ ವಿ.ಪಾಳ್ಯ, ಮಧ್ಯಾಹ್ನ 2 ರಿಂದ 5 ರವರೆಗೆ ನಲ್ಲಿಕಟ್ಟೆ, ಗುರುವಾರ ಬೆಳಿಗ್ಗೆ 10 ರಿಂದ 1 ರವರೆಗೆ ಹುಲ್ಲೂರು, ಮಧ್ಯಾಹ್ನ 2 ರಿಂದ 5 ರವರೆಗೆ ಬೆಟ್ಟದ ನಾಗೇನಹಳ್ಳಿ, ಶುಕ್ರವಾರ ಬೆಳಿಗ್ಗೆ 10 ರಿಂದ 1 ರವರೆಗೆ ಮಳಲಿ, ಮಧ್ಯಾಹ್ನ 2 ರಿಂದ 5 ರವರೆಗೆ ಬೊಮ್ಮವ್ವನಾಗ್ತಿಹಳ್ಳಿ, ಶನಿವಾರ ಬೆಳಿಗ್ಗೆ 10 ರಿಂದ 1 ರವರೆಗೆ ಚಿಕ್ಕೇನಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಕೋಣನೂರು ಗ್ರಾಮಗಳಲ್ಲಿ ಸಂಚಾರಿ ಆರೋಗ್ಯ ಘಟಕ ಸಂಚರಿಸಲಿದೆ.

ಎರಡನೇ ವಾರ: ಸೋಮವಾರ ಬೆಳಿಗ್ಗೆ 10 ರಿಂದ 1 ರವರೆಗೆ ಹಳಿಯೂರು, ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಕಡ್ಲೇಗುದ್ದು, ಮಂಗಳವಾರ ಬೆಳಿಗ್ಗೆ 10 ರಿಂದ 1 ಮೇಗಳಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಹುಣಸೆಕಟ್ಟೆ, ಬುಧವಾರ ಬೆಳಿಗ್ಗೆ 10 ರಿಂದ 1 ರವರೆಗೆ ಆಲಘಟ್ಟ, ಮಧ್ಯಾಹ್ನ 2 ರಿಂದ 5 ರವರೆಗೆ ದೊಡ್ಡಿಗನಾಳು, ಗುರುವಾರ ಬೆಳಿಗ್ಗೆ 10 ರಿಂದ 1 ರವರೆಗೆ ಪಳಕಿಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಬೆಟ್ಟದ ಸಿದ್ದಾಪುರ, ಶುಕ್ರವಾರ ಬೆಳಿಗ್ಗೆ 10 ರಿಂದ 1 ರವರೆಗೆ ಡಿ.ಮದಕರಿಪುರ, ಮಧ್ಯಾಹ್ನ 2 ರಿಂದ 5 ರವರೆಗೆ ಚಿಕ್ಕಾಲಘಟ್ಟ, ಶನಿವಾರ ಬೆಳಿಗ್ಗೆ 10 ರಿಂದ 1 ರವರೆಗೆ ಚಿಕ್ಕಗುಂಟನೂರು, ಹಳುವುದರ ಗ್ರಾಮಗಳಲ್ಲಿ ಸಂಚಾರ ಆರೋಗ್ಯ ಘಟಕ ಸಂಚರಿಸಲಿದೆ.

ಮೂರನೇ ವಾರ: ಸೋಮವಾರ ಬೆಳಿಗ್ಗೆ 10 ರಿಂದ 1 ರವರೆಗೆ ಓಬಳಾಪುರ, ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಕೊಳಹಾಳು, ಮಂಗಳವಾರ ಬೆಳಿಗ್ಗೆ 10 ರಿಂದ 1 ಚಿಕ್ಕಪುರ, ಮಧ್ಯಾಹ್ನ 2 ರಿಂದ 5 ರವರೆಗೆ ಕೊಡಗವಳ್ಳಿ, ಬುಧವಾರ ಬೆಳಿಗ್ಗೆ 10 ರಿಂದ 1 ರವರೆಗೆ ವಡ್ಡರಸಿದ್ದವ್ವನಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ದ್ಯಾಮವ್ವನಹಳ್ಳಿ, ಗುರುವಾರ ಬೆಳಿಗ್ಗೆ 10 ರಿಂದ 1 ರವರೆಗೆ ಸಾದರಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಮಾನಂಗಿ, ಶುಕ್ರವಾರ ಬೆಳಿಗ್ಗೆ 10 ರಿಂದ 1 ರವರೆಗೆ ಕಾಟೀಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಐನಹಳ್ಳಿ, ಶನಿವಾರ ಬೆಳಿಗ್ಗೆ 10 ರಿಂದ 1 ರವರೆಗೆ ಹಳೇರಂಗಾಪುರ, ಮಧ್ಯಾಹ್ನ 2 ರಿಂದ 5 ರವರೆಗೆ ವಿಜಾಪುರ ಗ್ರಾಮಗಳಲ್ಲಿ ಸಂಚಾರಿ ಆರೋಗ್ಯ ಘಟಕ ಸಂಚರಿಸಲಿದೆ.

ನಾಲ್ಕನೇ ವಾರ: ಸೋಮವಾರ ಬೆಳಿಗ್ಗೆ 10 ರಿಂದ 1 ರವರೆಗೆ ಚಿಕ್ಕಬೆನ್ನೂರು, ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಹಿರೆಬೆನ್ನೂರು, ಮಂಗಳವಾರ ಬೆಳಿಗ್ಗೆ 10 ರಿಂದ 1 ಲಿಂಗವ್ವನಾಗ್ತಿಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಚಿಳಂಗಿ, ಬುಧವಾರ ಬೆಳಿಗ್ಗೆ 10 ರಿಂದ 1 ರವರೆಗೆ ಜಮ್ಮನಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಗೌರಮ್ಮನಹಳ್ಳಿ, ಗುರುವಾರ ಬೆಳಿಗ್ಗೆ 10 ರಿಂದ 1 ರವರೆಗೆ ಹೊಸರಂಗಾಪುರ, ಓಬವ್ವನಾಗ್ತಿಹಳ್ಳಿ, ಮಧ್ಯಾಹ್ನ 2 ರಿಂದ 5 ರವರೆಗೆ ಕಲ್ಕುಂಟೆ, ಶುಕ್ರವಾರ ಬೆಳಿಗ್ಗೆ 10 ರಿಂದ 1 ರವರೆಗೆ ಕೆ.ಬಳ್ಳಕಟ್ಟೆ, ಎನ್.ಬಳ್ಳಕಟ್ಟೆ, ಮಧ್ಯಾಹ್ನ 2 ರಿಂದ 5 ರವರೆಗೆ ಶೀಗೆಹಳ್ಳಿ, ಶನಿವಾರ ಬೆಳಿಗ್ಗೆ 10 ರಿಂದ 1 ರವರೆಗೆ ಸಿಂಗಾಪುರ ಗ್ರಾಮದಲ್ಲಿ ಸಂಚಾರಿ ಆರೋಗ್ಯ ಘಟಕ ಸಂಚರಿಸಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *