ಚಿತ್ರದುರ್ಗ ತಾಲ್ಲೂಕು ಇಸಮುದ್ರ ಗೊಲ್ಲರಹಟ್ಟಿಯಲ್ಲಿ ಅಂತರಾಷ್ಟಿçÃಯ ಮಹಿಳೆಯರ ವಿರುದ್ಧ ದೌರ್ಜನ್ಯ ತಡೆ ದಿನ ಹಾಗೂ ಮಾನವ ಹಕ್ಕುಗಳ ದಿನಾಚರಣೆ ನಿಮಿತ್ತ 16 ದಿನಗಳ ವಿಶೇಷ ಜಾಗೃತಿ ಅಭಿಯಾನದ ಅಂಗವಾಗಿ ಮೌಢ್ಯ ನಿವಾರಣೆ ಪದ್ಧತಿ ಅರಿವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಲಿಂಗತಜ್ಞೆ ಗೀತಾ.ಡಿ ಮಾತನಾಡಿ, ಗೊಲ್ಲರಹಟ್ಟಿಗಳಲ್ಲಿ ನಡೆಯುತ್ತಿರುವ ಹಿಂಸಾಚಾರಗಳು, ಮೌಡ್ಯ ಪದ್ಧತಿಗಳ ಆಚರಣೆಗಳು, ಮಹಿಳೆಯರ ವಿರುದ್ಧ ಶೋಷಣೆಗಳು, ಹಕ್ಕು ಮಕ್ಕಳಿಗೆ ಆಗುತ್ತಿರುವ ಶೋಷಣೆಗಳು, ಲಿಂಗಾಧಾರಿತ ಅಸಮಾನತೆ ಸೇರಿದಂತೆ ಈ ಆಚರಣೆಗಳ ವಿರುದ್ಧ ಇರುವ ಕಾಯ್ದೆ ಕಾನೂನುಗಳು, ಮಕ್ಕಳ ಸಹಾಯವಾಣಿ ಮತ್ತು 1098, ಮಹಿಳಾ ಸಹಾಯವಾಣಿ 181 ತುರ್ತುಸೇವೆ 121, ಡಿ.ವಿ. ಈ ಮೌಢ್ಯಚರಣೆಗಳಿಂದ ಮಹಿಳೆಯರಿಗೆ ಆಗುತ್ತಿರುವಂತಹ ಸಾಮಾಜಿಕ ಶೈಕ್ಷಣಿಕ ಮತ್ತು ಮಾನಸಿಕ ಹಿಂಸೆಗಳ ಬಗ್ಗೆ ಕೂಲಂಕುಶವಾಗಿ ವಿವರಿಸಿದರು.
ಜಿಲ್ಲಾ ಸಂಯೋಜಕ ಚೇತನ್ ಮಾತನಾಡಿ ಗೊಲ್ಲರಹಟ್ಟಿಯಲ್ಲಿ ನಡೆಯುತ್ತಿರುವ ಅಮಾನವೀಯ ಗೊಡ್ಡು ಸಂಪ್ರದಾಯಗಳ ವಿರುದ್ಧ ಧ್ವನಿ ಎತ್ತುವ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲಾ ಸಭಿಕರಿಗೆ ತಿಳಿ ಹೇಳಿದರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ನಡೆದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೆರವಿಗೆ ನಿಲ್ಲುತ್ತದೆ ಎಂದು ಮನವರಿಕೆ ಮಾಡಿದರು.
ಗ್ರಾ.ಪಂ.ಕಾರ್ಯದರ್ಶಿ ಮಲ್ಲೇಶಪ್ಪ ಮಾತನಾಡಿ ಗೊಲ್ಲರಹಟ್ಟಿಯ ಮೌಢ್ಯಗಳು ನಿವಾರಣೆಯಾಗದೇ ಹೋದರೆ ಮುಂದಿನ ಪೀಳಿಗೆಯ ಭವಿಷ್ಯ ನಶಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭರಮಸಾಗರ ಯೋಜನೆಯ ಮೇಲ್ವಿಚಾರಕಿ ಪ್ರೇಮ, ಗ್ರಾ.ಪಂ.ಸದಸ್ಯರಾದ ರಾಮಚಂದ್ರಪ್ಪ, ನಾಗಪ್ಪ, ಕ್ಯಾತಪ್ಪ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಮತ್ತು ಇಸಮುದ್ರ ಗೊಲ್ಲರಹಟ್ಟಿಯ ಗ್ರಾಮಸ್ಥರು ಉಪಸ್ಥಿತರಿದ್ದ ರು.