ಚಿತ್ರದುರ್ಗ : ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವತಿಯಿಂದ ಚಿತ್ರದುರ್ಗ 66 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಪಂಡರಹಳ್ಳಿ ವಿ.ವಿ ಕೇಂದ್ರಕ್ಕೆ ವಿದ್ಯುತ್ ಸರಬರಾಜಾಗುವ ಮಾರ್ಗ-3ರ ವಾಹಕ ಬದಲಾವಣೆ ಮತ್ತು ಗೋಪುರಗಳನ್ನು ನಿರ್ಮಾಣ ಮಾಡುವ ಕಾಮಗಾರಿಗೆ ಪಂಡರಹಳ್ಳಿ, ಚಿತ್ರಹಳ್ಳಿ, ಹೆಚ್.ಡಿ.ಪುರ ಮತ್ತು ಹೊಳಲ್ಕೆರೆ 66/11 ಕೆ.ವಿ ವಿ.ವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ಮಾರ್ಗ ಮುಕ್ತತೆ ತೆಗೆದುಕೊಳ್ಳುವುದರಿಂದ ಇದೇ ಡಿ.9 ರಿಂದ 18 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಪಂಡರಹಳ್ಳಿ, ಅನ್ನೆಹಾಳು, ಹುಲ್ಲೂರು, ಜಾನುಕೊಂಡ, ಸಿದ್ದಾಪುರ, ಗೋಡಬನಾಳು, ಸೊಂಡೆಕೊಳ, ಸೊಲ್ಲಾಪುರ, ಕುರುಬರಹಳ್ಳಿ, ಬೆಟ್ಟದ ನಾಗೇನಹಳ್ಳಿ, ಹೆಚ್.ಡಿ.ಪುರ, ಟಿ.ನುಲೇನೂರು, ಬೋದಿಪುರ, ತಾಳ್ಯ, ಮತ್ತಿಘಟ್ಟ, ತೆಕಲವಟ್ಟಿ, ಚಿತ್ರಹಳ್ಳಿ, ಬಿ.ಜಿ.ಹಳ್ಳಿ, ಮದ್ದೇರು, ಕೇಶವಪುರ, ಕೊಂಡಾಪುರ, ಹೊಳಲ್ಕೆರೆ, ಚನ್ನಪಟ್ಟಣ, ಹರೇನಹಳ್ಳಿ, ಪುಣಜೂರು, ಎನ್.ಜಿ.ಹಳ್ಳಿ, ಗುಂಡೇರಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.