ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಸುಲ್ತಾನಿಪುರ ಪಿಚ್ಚಾರಹಟ್ಟಿ ಸಮುದಾಯ ಭವನದಲ್ಲಿ ಮಂಗಳವಾರ ಜನ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಒತ್ತಡ ನಿರ್ವಹಣೆ ಮತ್ತು ವೃತ್ತಿ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪಿ.ಶರೀಫ್ ಅವರು, ಒತ್ತಡ ನಿರ್ವಹಣೆಯ ಬಗ್ಗೆ ಕುಟುಂಬದಲ್ಲಿ ತಾಳ್ಮೆ ತುಂಬಾ ಮುಖ್ಯ. ಯಾವುದೇ ಒಂದು ವಿಷಯದಲ್ಲೂ ಜವಾಬ್ದಾರಿ ತೆಗೆದುಕೊಳ್ಳುವ ಮೊದಲು ಹಿಡಿ ಕುಟುಂಬದವರು ಕುಳಿತು ಚರ್ಚಿಸಿ, ನಂತರದಲ್ಲಿ ಒಳ್ಳೆಯ ವಿಷಯ ಅಥವಾ ಅಭಿಪ್ರಾಯ ತಿಳಿಸಬೇಕು ಎಂದರು.
ಕುಟುಂಬದಲ್ಲಿ ಸರ್ವರು ಸಮಾನರಾಗಿರಬೇಕು. ಸಣ್ಣ ಸಣ್ಣ ವಿಷಯಗಳಿಗೆ ಜಗಳವಾದದಂತೆ ಸಮಾಧಾನದಿಂದ ವಿಷಯ ಮನ್ನಣೆ ಮಾಡಬೇಕು ಎಂದು ಹೇಳಿದರು.
ವಕೀಲೆ ಶಕೀಲಾ ಬಾನು ಅವರು, ಸಖಿ ಒನ್ ಸ್ಟಾಪ್ ಸೆಂಟರ್‍ನ ಕಾರ್ಯವೈಖರಿ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಜನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮ ಸಂಯೋಜಕಿ ಶೃತಿ ಮಾತನಾಡಿ, ಕೌಶಲ್ಯ ತರಬೇತಿ ಮತ್ತು ವೃತ್ತಿ ತರಬೇತಿ ಪಡೆಯುವುದು ತುಂಬಾ ಮುಖ್ಯವಾಗಿದೆ. ಸರ್ಕಾರದಿಂದ ತರಬೇತಿ ಪಡೆದ ನಂತರ ಸರ್ಟಿಫಿಕೇಟ್ ಅನ್ನು ವಿತರಿಸಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಇಲಾಖೆಗಳಿಂದ ಸಬ್ಸಿಡಿ ಅಥವಾ ಸಹಾಯಧನ ಪಡೆದು ವೃತ್ತಿಯನ್ನು ನಿರ್ವಹಿಸಿಕೊಂಡು ಹೋಗಬಹುದು ಎಂದು ತಿಳಿಸಿದರು.
ಮಹಿಳಾ ಸಬಲೀಕರಣ ಘಟಕದ ಜಂಡರ್ ಸ್ಪೆಷಲಿಸ್ಟ್ ಟಿ.ಗೀತಾ ಮಾತನಾಡಿ, ಬಾಲ್ಯ ವಿವಾಹ ನಿμÉೀಧ ಕಾಯ್ದೆ, ಪೆÇೀಕ್ಸೋ ಕಾಯ್ದೆ ಮತ್ತು ಜಿಲ್ಲೆಯಲ್ಲಿ ಶಕ್ತಿ ಸದನ ಸಖಿನಿವಾಸ್ ಇವುಗಳ ಕಾರ್ಯವೈಖರಿಗಳ ಬಗ್ಗೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಇರುವ ಮಹಿಳಾಧಾರಿತ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ನಂತರದಲ್ಲಿ ವೃತ್ತಿ ತರಬೇತಿಯನ್ನು ಪಡೆದ ಅಭ್ಯರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ರುದ್ರಮ್ಮ, ಗ್ರಾಮಸ್ಥರು ಇದ್ದರು.