Breaking
Mon. Dec 23rd, 2024

ಜಿಲ್ಲಾ ಆಯುಷ್ ಇಲಾಖೆಯಿಂದ ಜಿಲ್ಲೆಯಾದ್ಯಂತ ಅಭಿಯಾನ ಸಾರ್ವಜನಿಕರ ಆರೋಗ್ಯಕ್ಕಾಗಿ “ಪ್ರಕೃತಿ ಪರೀಕ್ಷಾ ಅಭಿಯಾನ”

ಚಿತ್ರದುರ್ಗ

ಪ್ರಕೃತಿಯನ್ನು ತಿಳಿದು ಅದರ ಆರೋಗ್ಯಕರವಾಗಿ ಎಲ್ಲಾ ಸಾರ್ವಜನಿಕರು ಇರಬೇಕು ಎಂಬ ಆಶಯದೊಂದಿಗೆ ಭಾರತ ಸರ್ಕಾರದ ಆಯುಷ್ ಮಂತ್ರಾಲಯ “ದೇಶ್ ಕಿ ಪ್ರಕೃತಿ ಪರೀಕ್ಷೆ” ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಅಭಿಯಾನವು ಕಳೆದ ನವೆಂಬರ್ 26 ರಿಂದ ಪ್ರಾರಂಭವಾಗಿದ್ದು, 25ರವರೆಗೆ ದೇಶದಾದ್ಯಂತ ಡಿಸೆಂಬರ್. ಇದು ಮೊಬೈಲ್ ಆಯಪ್ ಆಧಾರಿತ ಕಾರ್ಯಕ್ರಮವಾಗಿದ್ದು, ಈ ಆಯಪ್ಅನ್ನು ಪ್ರಕೃತಿ ಅಳವಡಿಸಿಕೊಂಡು ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಕಾಲಕಾಲಕ್ಕೆ ನಿಮ್ಮ ಅನುಸಾರವಾಗಿ ಆರೋಗ್ಯಕ್ಕೆ ಪೂರಕವಾದ ಸೂಚನೆ, ಸಲಹೆಗಳು ನಿಮ್ಮ ಮೊಬೈಲ್‌ಗೆ ಬರಲಿವೆ. ಈ ಅಭಿಯಾನವನ್ನು ಜಿಲ್ಲಾ ಆಯುಷ್ ಇಲಾಖೆಯು ಸಹ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ. ಆಸಕ್ತ ಸಾರ್ವಜನಿಕರು ಹತ್ತಿರದ ಆಯುಷ್ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳನ್ನು ಸಂಪರ್ಕಿಸುವ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಮೊಬೈಲ್ ಆಯಪ್ ಡೌನ್‌ಲೋಡ್ ಮಾಡಿಕೊಳ್ಳುವಲ್ಲಿ ಹಾಗೂ ನಿಮ್ಮ ಪ್ರಕೃತಿಯನ್ನು ನಿರ್ಧರಿಸುವಲ್ಲಿ ಸಹಕರಿಸುತ್ತಾರೆ.
ಕಾಯಿಲೆ ಬಂದಾಗ ವೈದ್ಯರಲ್ಲಿ ಚಿಕಿತ್ಸೆ ಪಡೆದರೆ ಕಾಯಿಲೆ ಬರದಂತೆಯೇ ಸದೃಢವಾಗಿ ಬದುಕುವುದು ಆರೋಗ್ಯ. ನಾವು ಆರೋಗ್ಯವಾಗಿರಲು ಇರುವ ಏಕೈಕ ಮಾರ್ಗವೆಂದರೆ ಉತ್ತಮ ಆಹಾರ ಮತ್ತು ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು. ಮನುಷ್ಯರು ಪ್ರತಿಯೊಬ್ಬ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಭಿನ್ನ. ನಮ್ಮ ಎತ್ತರ, ನಿಲುವು, ಮೈಬಣ್ಣ, ಜೀರ್ಣಶಕ್ತಿ, ಮಾನಸಿಕ ಸ್ಥಿತಿ ಹೀಗೆ ಪ್ರತಿಯೊಬ್ಬರು ಶಾರೀರಿಕವಾಗಿ ಮಾನಸಿಕವಾಗಿ ಒಬ್ಬರಿಗಿಂತ ಬೇರೆಯವರಿಗೆ ಭಿನ್ನ ಇದನ್ನೇ ಆಯುರ್ವೇದದಲ್ಲಿ ಪ್ರಕೃತಿ ಎಂದು ಹೇಳಿದ್ದಾರೆ. ಪ್ರಕೃತಿ ಅನುಸಾರವಾಗಿ ನಾವು ಆಹಾರ, ಜೀವನಶೈಲಿಯನ್ನು ತೆಗೆದುಕೊಂಡರೆ ನಾವು ಆರೋಗ್ಯಕರವಾಗಿರಬಹುದು. ಉದಾರಣೆಗೆ ಒಂದು ಪ್ರಮಾಣದ ಆಹಾರ, ಜೀರ್ಣ, ಚೆನ್ನಾಗಿದ್ದವರಲ್ಲಿ ಆರೋಗ್ಯವನ್ನು ನೀಡಿದರೆ ಅದೇ ಪ್ರಮಾಣದ ಆಹಾರ, ಜೀರ್ಣ ಶಕ್ತಿ ದುರ್ಬಲವಾಗಿ ಇರುವವರಲ್ಲಿ ಖಾಯಿಲೆ ಉಂಟುಮಾಡಬಹುದು. ಆದ ಕಾರಣ ನಮ್ಮ ಪ್ರಕೃತಿಗೆ ಅನುಸಾರವಾಗಿ ನಮ್ಮ ಆಹಾರ ನಾವು ತಿಳಿದುಕೊಳ್ಳಬೇಕು.
ಆಯುರ್ವೇದದಲ್ಲಿ ಪ್ರಕೃತಿಯನ್ನು ಮೂರು ತರನಾಗಿ ವಿಂಗಡಿಸಿದ್ದಾರೆ. ವಾತ ಪ್ರಕೃತಿ, ಪಿತ್ತ ಪ್ರಕೃತಿ ಹಾಗೂ ಕಫ ಪ್ರಕೃತಿ. ಈ ಪ್ರಕೃತಿಗಳಿಗನುಸಾರವಾಗಿ ಕೆಲವು ತರದ ಕಾಯಿಲೆಗಳು ಬರುವ ಸಾಧ್ಯತೆಗಳು ಇರುತ್ತವೆ. ಉದಾಹರಣೆಗೆ ಕಫ ಪ್ರಕೃತಿ ಇರುವ ವ್ಯಕ್ತಿಯಲ್ಲಿ ಮಧುಮೇಹ, ಬೊಜ್ಜು ಈ ತರದ ಕಾಯಿಲೆಗಳು, ವಾತ ಪ್ರಕೃತಿ ಇರುವವರಲ್ಲಿ ಕೀಲು ನೋವು ಈ ತರಹದ ಕಾಯಿಲೆಗಳು, ಪಿತ್ತ ಪ್ರಕೃತಿ ಇರುವವರಲ್ಲಿ ಗ್ಯಾಸ್ಟ್ರಿಕ್, ಲಿವರ್‌ಗೆ ಸಂಬಂಧಿಸಿದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ನಮ್ಮ ಪ್ರಕೃತಿ ಯಾವುದು ಎಂದು ಮೊದಲೇ ತಿಳಿದುಕೊಂಡಿದ್ದೇವೆ ನಮ್ಮ ಆಹಾರ ವಿಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಪ್ರಕೃತಿಯ ಅನುಸಾರವಾಗಿ ಬರುವ ಖಾಯಿಲೆಗಳಿಂದ ನಾವು ದೂರವಾಗಬಹುದು ಅಥವಾ ಇಲ್ಲದಿದ್ದರೆ ಪ್ರಕೃತಿಯ ಅನುಸಾರ ಆಹಾರ ವಿಹಾರವನ್ನು ರೂಢಿಸಿಕೊಳ್ಳಬಹುದು.
ಎಲ್ಲಾ ಸಾರ್ವಜನಿಕರು ತಮ್ಮ ತಮ್ಮ ಪ್ರಕೃತಿಯನ್ನು ತಿಳಿದುಕೊಂಡು ಅದರ ಅನುಸಾರವಾಗಿ ನೀಡಲಾಗುವ ಸಲಹೆ, ಸೂಚನೆಗಳನ್ನು ಕಾಲಕಾಲಕ್ಕೆ ಅನುಸರಿಸಿ ಆರೋಗ್ಯಕರವಾಗಿರಲು ಅನುವಾಗುವಂತೆ ಹೆಚ್ಚು ಜನರು ಈ ಮೊಬೈಲ್ ಆಯಪ್ ಬಳಸಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ಅವರು ಕೋರಿದ್ದಾರೆ.

Related Post

Leave a Reply

Your email address will not be published. Required fields are marked *