ಬೆಂಗಳೂರು : ಸಾಲುಮರದ ತಿಮ್ಮಕ್ಕ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಜಯನಗರ ಒಫೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.
ಸಾಲು ಮಾದರ ತಿಮ್ಮಕ್ಕ 17 ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.
ಸಾಲುಮರದ 113 ವರ್ಷದ ಶತಾಯುಷಿ ತಿಮ್ಮಕ್ಕ ವಯೋಸಹಜವಾಗಿ ಅಸ್ವಸ್ಥರಾಗಿದ್ದಾರೆ.
ನೂರಾರು ಮರಗಳನ್ನು ಪೋಷಿಸುವುದರಿಂದ ಮರಗಳ ತಾಯಿ ಎಂದು ಕರೆಸಿಕೊಳ್ಳುವ ಸಾಲುಮರದ ತಿಮ್ಮಕ್ಕ ಇಲ್ಲಿಯವರೆಗೆ ಲಕ್ಷಾಂತರ ಸಸಿಗಳನ್ನು ನೆಟ್ಟಿದ್ದಾರೆ.