ಬೆಳಗಾವಿ: ನಮ್ಮದೇ ಸರ್ಕಾರವಿದ್ದರೂ ಅನುದಾನ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿರುವ ಕಾಂಗ್ರೆಸ್ ನವರಿಗೆ ಅನುದಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅತೃಪ್ತಿ ವ್ಯಕ್ತಪಡಿಸಿದ ನಂತರ ಸದನದಲ್ಲಿ ಈ ಬಗ್ಗೆ ಪ್ರಕಟಿಸುವುದಾಗಿ ಹೇಳಿದರು. ಹಣಕಾಸಿನ ಕೊರತೆಯನ್ನು ನೀಗಿಸಲು ಒಟ್ಟು 6,000 ಕೋಟಿ ರೂ. ಬಿಡುಗಡೆಯನ್ನು ಘೋಷಿಸುತ್ತೇನೆ.
ಲೋಕೋಪಯೋಗಿ ಇಲಾಖೆಯಿಂದ 4000 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 2000 ಕೋಟಿ ರೂ. ಹಣ ನೀಡಲಾಗುವುದು ಎಂದು ಘೋಷಿಸಿದರು. ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿಗೆ ಎರಡು ಇಲಾಖೆಗಳಿಂದ ಒಟ್ಟು 6 ಸಾವಿರ ಕೋಟಿ ರೂ. ಹಣ ಬಿಡುಗಡೆಯಾಗಿದೆ.
ಪ್ರತಿ ಕ್ಷೇತ್ರಕ್ಕೆ ಕನಿಷ್ಠ 26 ಕೋಟಿಗೂ ಹೆಚ್ಚು ಹಣ ಲಭ್ಯವಾಗಲಿದೆ. ಯಾರಿಗೂ ಬೇಸರವಾಗುವುದಿಲ್ಲ ಎಂದು ಸಿಎಂ ಭರವಸೆ ನೀಡಿದರು.