ಬಾಗಲಕೋಟೆ: ತಾಲೂಕಿನ ಮುಚಖಂಡಿ ಗ್ರಾಮದಲ್ಲಿ ಐತಿಹಾಸಿಕ ವೀರಭದ್ರೇಶ್ವರ ಮಹಾರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ ಶ್ರೀ ವೀರಭದ್ರೇಶ್ವರನಿಗೆ ಅಭಿಷೇಕ, ರುದ್ರಾಭಿಷೇಕ, ಮಹಾಮೃತ್ಯಂಜಯ ಮಂತ್ರ, ಶಿವಾಮೃತ ಪಠಣ ಮಾಡುವ ಮೂಲಕ ಪುಷ್ಪಾಲಂಕಾರ ಮಹಾ ಮಂಗಳಾರತಿ ನೆರವೇರಿತು.
16:00 ಕ್ಕೆ ಚಿಕ್ಕ ರಥೋತ್ಸವ ನಡೆಯಿತು. ನಂತರ ಸಂಜೆ 5:00 ಗಂಟೆಗೆ ವೀರಭದ್ರೇಶ್ವರಸ್ವಾಮಿ ಮಹಾರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ಸಾವಿರಾರು ಜನರು ದೀಪ ಬೆಳಗಿಸಿ ದೀಪೋತ್ಸವ ಆಚರಿಸಿದರು. ರಾತ್ರಿ ಶ್ರೀಕೃಷ್ಣ ಪಾರಿಜಾತ ನಡೆಯಿತು. ಭಕ್ತರು ಅಗ್ನಿಪ್ರವೇಶ ಮಾಡಿ ವೀರಭದ್ರೇಶ್ವರನಿಗೆ ನಮನ ಸಲ್ಲಿಸಿದರು.