ಬಳ್ಳಾರಿ : ಗಣಿತ ವಿಷಯವು ಕಬ್ಬಿಣದ ಕಡಲೆಯಲ್ಲ. ಬದಲಾಗಿ ಮೂಲ ಸೂತ್ರಗಳನ್ನು ಅರಿತುಕೊಂಡು, ಗಣಿತದಿಂದ ಕಲಿಯುವ ಆಸಕ್ತಿಯನ್ನು ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ.ಎಸ್.ಎಂ ಅವರು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಮತ್ತು ಜಿಲ್ಲಾ ಪಂಚಾಯತ್, ಬಳ್ಳಾರಿ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್(ಸರ್ಕಾರಿ ಬಾಲಕಿಯರ ಶಾಲೆ) ನಲ್ಲಿ ಸೋಮವಾರ ನಡೆದ ರಾಷ್ಟಿçÃಯ ಗಣಿತ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಸಮಾಜಕ್ಕೆ ಕೊಡುಗೆ ನೀಡಿದ ಮಹಾನ್ ಮೇಧಾವಿಗಳ ಸ್ಮರಣೆಗಾಗಿ ವಿವಿಧ ದಿನಾಚರಣೆಗಳು. ಅದರಂತೆ ಶ್ರೇಷ್ಠ ಭಾರತೀಯ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್ ಅವರ ಜನ್ಮ ದಿನದ ಸವಿನೆನಪಿಗಾಗಿ ಡಿ.22 ರಂದು ರಾಷ್ಟಿçÃಯ ಗಣಿತ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.
ಶ್ರೀನಿವಾಸ ರಾಮಾನುಜನ್ ಅವರು ಅಪಾರ ಜ್ಞಾನ ಉಳ್ಳವರು. ಅವರು ತಮ್ಮ 32 ನೇ ವಯಸ್ಸಿನಲ್ಲಿ ಯಶಸ್ಸಿನ ಛಲ ಹೊಂದಿ, ಸಾಧನೆಯ ಮೈಲಿಗಲ್ಲು ತಲುಪಿದವರು. ಗಣಿತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಪ್ರಕಟಿಸಿದರು.
ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಅಂಕ ಗಳಿಸುವಂತೆ ಗಣಿತ ವಿಷಯದಲ್ಲಿಯೂ ಸಹ ಪರಿಣಿತಿ ಹೊಂದುವುದು ಅಗತ್ಯ. ವಿದ್ಯಾರ್ಥಿನಿಯರು ತಳ ಮಟ್ಟದಲ್ಲಿಯೇ(ಬೇಸಿಕ್) ಗಣಿತ ವಿಷಯವನ್ನು ಅಚ್ಚುಕಟ್ಟಾಗಿ ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿ.
ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕರಾದ ಎ.ಭೈರಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣಿತ ವಿಷಯದ ಲೆಕ್ಕಚಾರ ತಿಳಿದುಕೊಂಡರೆ ದೈನಂದಿನ ಉತ್ತಮ ವ್ಯವಹಾರ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಗಣಿತ ಕ್ಷೇತ್ರದಲ್ಲಿ ವಿಶ್ವಕ್ಕೆ ಭಾರತದ ಕೊಡುಗೆ ಅಪಾರ. ವಿದ್ಯಾರ್ಥಿಗಳು ಗಣಿತ ವಿಷಯವನ್ನು ಕಲಿಯುವಲ್ಲಿ ಸಕ್ರೀಯವಾಗಿ ಪರೀಕ್ಷಿಸಿ, ವಿವಿಧ ಆವಿಷ್ಕಾರ-ನೂತನ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ.
ಡಿಡಿಪಿಐ ಕಚೇರಿಯ ಗಣಿತ ವಿಷಯ ನಿರ್ವಾಹಕರಾದ ಬಸವರಾಜ.ಎಂ ಮಾತನಾಡಿ, ಗಣಿತ ವಿಷಯ ಕ್ಲಿಷ್ಟಕರವಲ್ಲ. ಜ್ಞಾನದಿಂದ ಮನೋವೃದ್ಧಿಯಾಗಲಿದೆ, ವಿದ್ಯಾರ್ಥಿಗಳು ಗಣಿತ ಪ್ರಾಮುಖ್ಯತೆ ಅರಿತುಕೊಂಡು ಗಣಿತ ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಪಿಯುಸಿಯಲ್ಲಿ ಗಣಿತ ವಿಷಯಕ್ಕೆ ಹಿಂಜರಿಯುತ್ತಾರೆ. ವೈದ್ಯಕೀಯಶಾಲೆಯಲ್ಲಿಯೇ ಗಣಿತ ವಿಷಯದ ಜ್ಞಾನ ಸಂಪಾದಿಸಿಕೊಆಡು, ಉನ್ನತ ಶೈಕ್ಷಣಿಕ ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಪ್ರಕಟಿಸಿದರು.
ಸೊನ್ನೆಯ ಮಹತ್ವ ಪ್ರತಿಯೊಬ್ಬರಿಗೂ. ಸೊನ್ನೆಯ ಧ್ವನಿ ನೀಡಿದ ಶ್ರೇಯಸ್ಸು ಭಾರತಕ್ಕಿದೆ. ಶ್ರೀನಿವಾಸ ರಾಮಾನುಜನ್ ಅಂಗಾರ್, ಆರ್ಯಭಟ ಸೇರಿದಂತೆ ಇನ್ನೂ ಅನೇಕ ಭಾರತೀಯರು ಗಣಿತ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.
ಇದೇ ವೇಳೆ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದ ಬಳಿಕ ಕೆಪಿಎಸ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿಯರಿಂದ ತಯಾರಿಸಲ್ಪಟ್ಟ ಗಣಿತಗಜಿನ್ ಅವರನ್ನು ಲೋಕಾರ್ಪಣೆಗೊಳಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರ್ಕಾರಿ (ಮಾಪು) ಪಿಯು ಕಾಲೇಜಿನ ಉಪನ್ಯಾಸಕರಾದ ಡಾ.ಯು.ಶ್ರೀನಿವಾಸ್ ಮೂರ್ತಿ ಅವರು ರಾಮಾನುಜನ್-ಸ್ಕ÷ವ್ಯರ್ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಷಣ ಮಾಡಿದ್ದು ವಿಶೇಷವಾಗಿತ್ತು.
ಈ ವೇಳೆ ಎನ್ ಐಸಿ ಬಳ್ಳಾರಿ ಕೇಂದ್ರದ ಸಿ.ವೆಂಕಟರಮಣ ಮೂರ್ತಿ, ಜಿಪಂ ಜಿಲ್ಲಾ ಯೋಜನೆಯ ಸಂಯೋಜಕರಾದ ರಾಮಚಂದ್ರ ರೆಡ್ಡಿ.ಜಿ.ಬಿ., ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಸುರೇಖಾ ಸೇರಿದಂತೆ ಕೆಪಿಎಸ್ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು .