ಹುಬ್ಬಳ್ಳಿ : ಸಿಲಿಂಡರ್ ಸೋರಿಕೆಯಾಗಿ ಅಯ್ಯಪ್ಪ ಭಕ್ತರ ಸಾವನ್ನಪ್ಪಿರುವ ಘಟನೆ ಅಚ್ಚವ್ವ ನಗರದ ಉಣಕಲ್ ಕಾಲೋನಿಯಲ್ಲಿ ನಡೆದಿದೆ. ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ರಾಜು ಮುಗೇರಿ (16) ಮೃತ ಬಾಲಕ. ಈ ಹಿಂದೆ ಬಾಲಕನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್ ಆಸ್ಪತ್ರೆಯಲ್ಲಿ ಮಾಲಾಧಾರಿ ಬಾಲಕ ಮೃತಪಟ್ಟಿದ್ದಾನೆ.
ಉಳಿದ ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯ ಉಚ್ಚವ್ವ ಉಣಕಲ್ ಕಾಲೋನಿಯಲ್ಲಿ ಸಿಲೆಂಡರ್ ಸೋರಿಕೆಯಾಗಿ 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು.
ನಿನ್ನೆ ಇಬ್ಬರು ಸಾವನ್ನಪ್ಪಿದ್ದರೆ, ಇಂದು ಒಬ್ಬರು ಸಾವನ್ನಪ್ಪಿದ್ದಾರೆ. ಮಗನ ಸಾವಿನ ಸುದ್ದಿ ತಿಳಿದ ರಾಜು ಅವರ ತಾಯಿ ಮತ್ತು ಅಜ್ಜಿ ಆಸ್ಪತ್ರೆಯಲ್ಲಿ ದುಃಖದ ಅಲೆಯಲ್ಲಿ ಮುಳುಗಿದ್ದರು.