ಚಿಕ್ಕೋಡಿ : ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ರಾಜ್ಯದ ನಿಪ್ಪಾಣಿ ಮುಧೋಳ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.
ಮೃತ ಮಹಿಳೆಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಿರ್ಮಲಾ ಅವಟೆ (60) ಎಂದು ಗುರುತಿಸಲಾಗಿದೆ. ವಾಹನ ಚಲಾಯಿಸುತ್ತಿದ್ದ ಚಿಕ್ಕೋಡಿ ಹೆಸ್ಕಾಂ ಸಹಾಯಕ ಎಂಜಿನಿಯರ್ ನೇಮಿನಾಥ ಅವಟೆ (43) ಅದೃಷ್ಟವಶಾತ್ ಚಿಕ್ಕೋಡಿ ಪಟ್ಟಣದ ಯಾದವ ನಗರದಲ್ಲಿ ವಾಸವಿದ್ದ ಇವರು ಚಾಲನೆ ಮಾಡುತ್ತಿದ್ದಾಗ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಉಮರಾಣಿ ಬಳಿ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಗಾಯಗೊಂಡಿರುವ ನೇಮಿನಾತ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಠಾಣೆ ಡಿವೈಎಸ್ಪಿ ಗೋಪಾಲಕೃಷ್ಣಗೌಡ, ಸಿಪಿಐ ವಿಶ್ವನಾಥ ಚೌಗಲಾ, ಸಂಚಾರ ಠಾಣೆ ಪಿಎಸ್‌ಐ ರೂಪಾ ಗೂಡೋದ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.