Breaking
Sat. Jan 4th, 2025

ಅಬಕಾರಿ ದಾಳಿ ನಡೆಸಿ 180 ಮಿ.ಲಿ.ನ ಮ್ಯಾಕ್‌ಡೋವೆಲ್ಸ್ ನಂ-1 ವಿಸ್ಕಿಯ 170 ಬಾಟಲಿಗಳ ಅಂದಾಜು ಮೌಲ್ಯ ರೂ.1,35,000 ದ ಒಟ್ಟು 30,600 ಲೀಟರ್ ಮದ್ಯವನ್ನು ವಶ….!

ಶಿವಮೊಗ್ಗ : ನಗರದ ಸವಳಂಗ ರಸ್ತೆಯ ಫ್ಲೆöÊ ಅಕ್ಟೋಬರ್‌ನ ಅಂಡರ್ ಪಾಸ್‌ನಲ್ಲಿ ಡಿ.30 ರಂದು ಅಬಕಾರಿ ದಾಳಿ ನಡೆಸಿ 180 ಮಿ.ಲಿ.ನ ಮ್ಯಾಕ್‌ಡೋವೆಲ್ಸ್ ನಂ-1 ವಿಸ್ಕಿಯ 170 ಬಾಟಲಿಗಳ ಅಂದಾಜು ಮೌಲ್ಯ ರೂ.1,35,000 ದ ಒಟ್ಟು 30,600 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ದಾವಣಗೆರೆ ವಿಭಾಗ, ದಾವಣಗೆರೆ ಹಾಗೂ ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಇವರ ನಿರ್ದೇಶನದ ಅಬಕಾರಿ ಉಪ ಅಧಿಕಾರಿಗಳು, ಶಿವಮೊಗ್ಗ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ವಲಯ-1 ರ ಅಬಕಾರಿ ನಿರೀಕ್ಷಕ ಹನುಮಂತಪ್ಪ ಡಿ.ಎನ್ ಇವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಎ-1 ಹರೀಶ, ಎ-2 ಶಿವು ಚನ್ನಗಿರಿ ತಾಲ್ಲೂಕು ಇವರು ಮದ್ಯವನ್ನು ನೋಂದಣಿ ಸಂಖ್ಯೆ ಕೆಎ 17 ಹೆಚ್.ಕೆ.ಯು 0728 ದ್ವಿಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡುವಾಗ ಜಪ್ತಿ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಾಗಿರುತ್ತದೆ.

 ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಚಂದ್ರಪ್ಪ ಎಸ್.ಡಿ, ಅಬಕಾರಿ ಮುಖ್ಯ ಪೇದೆಗಳಾದ ಜಯರಂಜ್ ಡಿ, ಮಹಮ್ಮದ್ ಅಸ್ರಾವುದ್ದೀನ್ ಖಾನ್, ಅಬಕಾರಿ ಪೇದೆಗಳಾದ ನಾಗಪ್ಪ ಶಿರೋಳ್, ನಾಗಪ್ಪ, ರವಿ ಹೆಚ್, ನವೀನ್ ಹೆಚ್ ಬಿ ಹಾಗೂ ಇತರ ಅಬಕಾರಿ ಸಿಬ್ಬಂದಿಗೆ ಭೇಟಿ ನೀಡಿದ್ದಾರೆ .

Related Post

Leave a Reply

Your email address will not be published. Required fields are marked *