Breaking
Sat. Jan 4th, 2025

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳು: ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸಲು ದಯವಿಟ್ಟು ಜನವರಿ 5 ರವರೆಗೆ ಅವಕಾಶ…..

ಚಿತ್ರದುರ್ಗ

ಚಿತ್ರದುರ್ಗ ಹಾಗೂ ಹೊಳಲ್ಕೆರೆ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2025ರ ಜ.05ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಲು, ಪ್ರಸ್ತುತ ಅರ್ಜಿ ಸಲ್ಲಿಸಲು ಕಾಲಾವಧಿ ಮುಕ್ತಾಯಗೊಂಡಿದೆ, ಅರ್ಜಿ ಸಲ್ಲಿಸಲು ವೆಬ್‌ಸೈಟ್‌ನಲ್ಲಿ ಒಟ್ಟು 04 ಹಂತಗಳು, ಮೊದಲನೇ ಹಂತದಲ್ಲಿ ಆನ್‌ಲೈನ್ ತಂತ್ರಾಂಶದಲ್ಲಿ ನಿಗಧಿತ ನಮೂನೆಯಲ್ಲಿ ಮಾಹಿತಿ, ಎರಡನೇ ಹಂತದಲ್ಲಿ ಅವರ ಭಾವಚಿತ್ರ ಸಹಿ ಅಪ್ಲೋಡ್ ಮಾಡುವುದು. ಮೂರನೇ ಹಂತ ತಮ್ಮ ದಾಖಲಾತಿಗಳನ್ನು ಅಪ್ಲೋಡ್ ಮಾಡುವುದು ಹಾಗೂ ನಾಲ್ಕನೇ ಹಂತ ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ-ಹಸ್ತಾಂಕ್ಷರ ಅಡಿ ಅರ್ಜಿಯನ್ನು ಪೂರ್ಣಗೊಳಿಸಬೇಕಾಗಿದೆ. ಇದರಲ್ಲಿ ಮೊದಲನೇ ಹಂತದಲ್ಲಿಯೇ ಅಪ್ಲಿಕೇಶನ್ ಸಕ್ಸಸ್‌ಪುಲ್ ಅಪ್‌ಲೋಡ್ ಎಂಬ ಸಂದೇಶಗಳು ಮೊಬೈಲ್‌ಗೆ ಸ್ವೀಕೃತವಾಗಿರುವುದರಿಂದ ಅರ್ಜಿಯನ್ನು ಪೂರ್ಣಗೊಳಿಸಲಾಗಿದೆ.
ಅರ್ಜಿ ಸಲ್ಲಿಸುವ ನಾಲ್ಕು ಹಂತಗಳನ್ನು ಪೂರ್ಣಗೊಳಿಸಲು ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2025ರ ಜ.5 ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದ ಪ್ರಕಟಣೆ.

Related Post

Leave a Reply

Your email address will not be published. Required fields are marked *