Breaking
Sun. Jan 5th, 2025

ಮಾರಕ ರೋಗಗಳ ವಿರುದ್ಧ ಲಸಿಕೆ ಕೊಡಿಸಿ, ನಿಮ್ಮ ಮಕ್ಕಳನ್ನು ರಕ್ಷಿಸಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್ ಸಲಹೆ

ಚಿತ್ರದುರ್ಗ : ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ತಪ್ಪದೇ 12 ಮಾರಕ ರೋಗಗಳ ವಿರುದ್ಧ ಲಸಿಕೆಗಳನ್ನು ಕೊಡಿ, ನಿಮ್ಮ ಮಕ್ಕಳನ್ನು ರಕ್ಷಿಸಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್ ಸಲಹೆ ಸೂಚನೆ.

  ನಗರದ ಚಳ್ಳಕೆರೆ ರಸ್ತೆಯ ವೆಂಕಟೇಶ್ವರ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಲಸಿಕಾ ಅಧಿವೇಶನ ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ತಿಂಗಳ ಅಂಗನವಾಡಿ ಕೇಂದ್ರದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಸರ್ಕಾರದಿಂದ ಉಚಿತ ಲಾಭಕ್ಕೆ. ಬುದ್ಧಿವಂತರಾಗಿ ನಿಮ್ಮ ಮಕ್ಕಳಿಗೆ ಸಂಪೂರ್ಣ ಲಸಿಕೆಗಳನ್ನು ಕೊಡಿಸಿ ಎಂದು ಹೇಳಿದರು.

  ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಬಾಲ್ಯ ವಿವಾಹ ಮಾಡಬೇಡಿ. ಶಿಕ್ಷಣ ಮೊದಲು ನಂತರ ಮದುವೆ. ಬಾಲ್ಯ ವಿವಾಹ ನಿμÉೀಧ ಕಾಯ್ದೆ ತುಂಬಾ ಕಠಿಣವಾಗಿದೆ. ಬಾಲ್ಯ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧ. ಹೆಣ್ಣು ರಕ್ಷಿಸಿ ಹೆಣ್ಣು ಓದಿ. ಬೇಟಿ ಬಚಾವೋ ಬೇಟಿ ಪಡವೋ ಬಾಲ್ಯ ವಿವಾಹಗಳನ್ನು ನಿಲ್ಲಿಸುವುದರಿಂದ ತಾಯಿ ಮರಣ ಶಿಶು ಮರಣ ಪ್ರಮಾಣ ತಗ್ಗಿಸಬಹುದು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಕುಟುಂಬ ಕಲ್ಯಾಣ ವಿಧಾನಗಳನ್ನು ಅನುಸರಿಸುವಲ್ಲಿ ಪುರುಷರ ಸಹಭಾಗಿತ್ವ ಬಹಳ ಪ್ರಮುಖವಾಗಿದೆ. ಇಲಾಖೆಯು ಪುರುಷರಿಗಾಗಿ ಎನ್ ಎಸ್ ವಿ ಒಂದು ಸರಳ ಸುಲಭ ಹೊಲಿಗೆ ಹಾಕದಂತಹ ನೂತನ ಗರ್ಭ ನಿರೋಧಕ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಈ ತಾಯಂದಿರ ಸಭೆಯಲ್ಲಿ ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ ಮನೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರು ಕುಳಿತು ವಿಚಾರ ಮಾಡಿ ನಿಮ್ಮ ಮನೆಯ ಪುರುಷರಿಗೆ ಈ ವಿಧಾನವನ್ನು ಉಪಯೋಗಿಸುವಂತೆ ಸೂಚಿಸಿ.

 ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷ ಕಾತ್ಯಾಯನಮ್ಮ ತಾಯಿ ಮಕ್ಕಳ ಪೌಷ್ಟಿಕ ಆಹಾರದ ಬಗ್ಗೆ ಸಭೆಯಲ್ಲಿ ಮಾಹಿತಿಾಧಿಕಾರಿ ಶಿಕ್ಷಣ.

  ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಜಾನಕಿ ಮಾತನಾಡಿ, ತಾಯಿ ಕಾರ್ಡಿನ ಮಹತ್ವ, ಮಕ್ಕಳಿಗೆ ತಗಲುವ ಯಾವ ರೋಗಕ್ಕೆ ಯಾವ ಲಸಿಕೆಯನ್ನು ನಿಗದಿಪಡಿಸಲಾಗಿದೆ. ಬೆಳವಣಿಗೆ ಪಟ್ಟಿ ದಾಖಲಾತಿ ಬಗ್ಗೆ ಮಾಹಿತಿ ಶಿಕ್ಷಣ. ತಾಲೂಕ್ ಆಶಾ ಬೋಧಕಿ ತಬಿತ ಅವರು ಎದೆ ಹಾಲಿನ ಮಹತ್ವದ ಬಗ್ಗೆ.

  ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಗೀತಾ, ಅಂಗನವಾಡಿ ಕಾರ್ಯಕರ್ತೆಯರಾದ ಆಶಾ ಮತ್ತು ರಂಗಮ್ಮ, ಆಶಾ ಕಾರ್ಯಕರ್ತೆಯರಾದ ರೇಣುಕಾ, ಅನುರಾಧ ತಾಯಂದಿರು, ಮಕ್ಕಳು, ಪತ್ತೆಯಾದವರು.

Related Post

Leave a Reply

Your email address will not be published. Required fields are marked *