ಚಿತ್ರದುರ್ಗ ಆವಿಷ್ಕಾರ್ ನ್ಯೂಸ್ ಜನವರಿ. 03: ಚಲಿಸುತ್ತಿದ್ದ ಟ್ರ್ಯಾಕ್ಟರ್ ಟೈರ್ ಬ್ಲಾಸ್ಟ್ ಪಲ್ಟಿಯಾಗಿ ಸಾವನ್ನಪ್ಪಿದ್ದು, ಎರಡು ಗಂಭೀರ ಘಟನೆ ತಾಲೂಕಿನ ಮೈಲಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ರೇಣುಕಾಪುರ ಗ್ರಾಮದ ನಿವಾಸಿ ಶಂಕರನಾಗ್ (38) ಎಂದು ಗುರುತಿಸಲಾಗಿದೆ. ಟ್ರಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ಆಂಧ್ರ ಮೂಲದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದರೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟ್ರ್ಯಾಕ್ಟರ್ ಕಡಪ ಕಲ್ಲು ಸಾಗಿಸುತ್ತಿದ್ದಾಗ ಅವಘಡ ಸಂಭವಿಸಿದೆ. ಸ್ಥಳಕ್ಕೆ ತಳಕು ಪಿಎಸ್ಐ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಳಕು ಪೊಲೀಸ್ ಠಾಣೆ ಘಟನೆ ನಡೆದಿದೆ.