ಸಾರ್ವಜನಿಕರು ಆಯುಷ್ ಪದ್ಧತಿಯ ಚಿಕಿತ್ಸೆ ಹಾಗೂ ಜೀವನ ಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯಕರ ಜೀವನ ನಡೆಸಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್. ನಾಗಸಮುದ್ರ.
ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಆಯುಷ್ ಸೇವೆಗಳು ಇಲ್ಲಿಯವರೆಗೆ ಉಚಿತವಾಗಿ ಲಭ್ಯವಿದೆ. ಬಹುತೇಕ ಗ್ರಾಮೀಣ ಭಾಗದಲ್ಲಿ ಇರುವ ಆಯುರ್ವೇದ ಚಿಕಿತ್ಸಾಾಲಯಗಳ ಮೂಲಕ ಉಚಿತ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ 32 ಸರ್ಕಾರಿ ಆಯುರ್ವೇದ ಚಿಕಿತ್ಸಾಾಲಯಗಳಿದ್ದು, ಎಲ್ಲಾ ರೋಗಿಗಳಿಗೆ ಆಯುರ್ವೇದದ ಪ್ರಾಥಮಿಕ ಚಿಕಿತ್ಸೆಗಳು ಲಭ್ಯವಿವೆ. ಈ 32 ಚಿಕಿತ್ಸಾಲಯಗಳಲ್ಲಿ 10 ಆಯುಷ್ ಆರೋಗ್ಯಮಂದಿರಗಳಾಗಿ ಉನ್ನತೀಕರಿಸಲಾಗಿದೆ, ಈ ಕೇಂದ್ರಗಳಲ್ಲಿ ಚಿಕಿತ್ಸೆಗೆ ರೋಗಾನುಸಾರ ಪಥ್ಯ, ಜೀವನಶೈಲಿ, ಯೋಗ, ಧ್ಯಾನ ಪ್ರಾಣಾಯಾಮ ತಿಳಿಸಲಾಗಿದೆ. ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ದಿನನಿತ್ಯವೂ ಯೋಗ, ಧ್ಯಾನಪ್ರಾಣಾಯಾಮ ಕಲಿಸಲು.
ಚಿತ್ರದುರ್ಗ ತಾಲ್ಲೂಕಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಜೆ.ಎನ್.ಕೋಟೆ, ಅಳಗವಾಡಿ, ಹಿರಿಯೂರು ತಾಲ್ಲೂಕಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಸೊಂಡೆಕೆರೆ, ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ನನ್ನಿವಾಳ, ಹಿರೇಹಳ್ಳಿ, ಓಬಳಾಪುರ ,ಹುಲಿಕುಂಟೆ. ಹೊಸದುರ್ಗ ತಾಲೂಕಿನ. ಆಲಘಟ್ಟ, ಕಂಗುವಳ್ಳಿ, ಹೆಬ್ಬಳ್ಳಿ ಇವು ಆಯುಷ್ ಆರೋಗ್ಯಮಂದಿರಗಳಾಗಿ ಮೇಲ್ದರ್ಜೆಗೇರಿಸಲ್ಪಟ್ಟ ಚಿಕಿತ್ಸಾಲಯ.
ಜಿಲ್ಲೆಯಲ್ಲಿ ನಾಲ್ಕು ಆಯುರ್ವೇದ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ, ಇಲ್ಲಿ ಮುಂದುವರಿದ ಹಾಗೂ ಆಯುರ್ವೇದ ವಿಶೇಷ ಚಿಕಿತ್ಸೆಗಳಾದ ಅಭ್ಯಂಗ, ಕಟಿಬಸ್ತಿ, ಜಾನುಬಸ್ತಿ, ಪಂಚಕರ್ಮ ಇತ್ಯಾದಿಗಳು ಉಚಿತವಾಗಿ ಲಭ್ಯವಿವೆ.
ಜಿಲ್ಲೆ, ಹೊಸದುರ್ಗ, ದೊಡ್ಡತೇಕಲವಟ್ಟಿ, ಚಳ್ಳಕೆರೆ ಹಾಗೂ ಹಿರಿಯೂರು ಇಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಹಿರಿಯೂರು ಹಾಗೂ ಚಳ್ಳಕೆರೆಯಲ್ಲಿ ಮೂಲವ್ಯಾಧಿಗೆ ಸಮರ್ಪಕ ಆಯುರ್ವೇದ ಚಿಕಿತ್ಸೆಯಾದ ಕ್ಷಾರಸೂತ್ರ ತಜ್ಞರು ಲಭ್ಯವಿದ್ದು, ಚಳ್ಳಕೆರೆಯಲ್ಲಿ ಇದಕ್ಕೆ ಸಂಬಂದಿಸಿದ ಮಹಿಳಾ ತಜ್ಞ ವೈದ್ಯರು ಲಭ್ಯರಿದ್ದಾರೆ.
ಕಿವಿಮೂಗು, ಗಂಟಲಿನ ಆಯುರ್ವೇದ ತಜ್ಞರು ಚಳ್ಳಕೆರೆಯ ಆಯುರ್ವೇದ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ. ಜಿಲ್ಲಾಸ್ಪತ್ರೆಯ ಆಯುಷ್ ವಿಭಾಗವು ಚಿತ್ರದುರ್ಗದ ಚಳ್ಳಕೆರೆ ರಸ್ತೆಯ ಆದಿಶಕ್ತಿನಗರ, ಮೂರನೇ ತಿರುವಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಇಲ್ಲಿ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ಪದ್ಧತಿಗಳಲ್ಲಿ ಚಿಕಿತ್ಸೆ ಲಭ್ಯವಿರುತ್ತದೆ. ಆಯುರ್ವೇದದ ವಿಶೇಷ ಚಿಕಿತ್ಸಾ ಪಂಚಕರ್ಮದ ತಜ್ಞರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಸಾರ್ವಜನಿಕರಿಗೆ ಪಂಚಕರ್ಮ ಸೇವೆಗಳು ಲಭ್ಯವಿವೆ.
ಆಯುರ್ವೇದ, ಯೋಗ, ಧ್ಯಾನ, ಪ್ರಾಣಾಯಾಮಗಳು ಭಾರತ ಪ್ರಪಂಚಕ್ಕೆ ಕೊಟ್ಟ ಅತ್ಯಮೂಲ್ಯ ಕೊಡುಗೆಗಳು. ಪ್ರಸ್ತುತ ಸುರಕ್ಷಿತ ಹಾಗೂ ಪರಿಪೂರ್ಣ ಚಿಕಿತ್ಸೆ ವಿಚಾರ ಬಂದಾಗ ಪ್ರಪಂಚವೇ ಭಾರತೀಯ ವೈದ್ಯಪದ್ಧತಿಗಳು ಗಮನಹರಿಸುತ್ತದೆ. ಹೊಸ ಹೊಸ ಸಂಶೋಧನೆ ಆಧುನಿಕ ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡು ಆಯುಷ್ ಪದ್ಧತಿಗಳು ಜಾಗತಿಕ ಮಟ್ಟಕ್ಕೇರಿವೆ. ಆಯುರ್ವೇದ ಚಿಕಿತ್ಸೆಗೆ ಬೇಡಿಕೆಯು ದಿನೇದಿನೇ ಹೆಚ್ಚುತ್ತಿದೆ.ಆಯುಷ್ ಎಂದರೆ ಆಯುರ್ವೇದ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ.
ಆಯುರ್ವೇದ: ಚಿಕಿತ್ಸೆಗಿಂತ ಆರೋಗ್ಯ ಕಾಪಾಡಲು ಹೆಚ್ಚು ಒತ್ತು ಕೊಡುವ ಈ ಚಿಕಿತ್ಸಾ ಪದ್ಧತಿಯಲ್ಲಿ ಆಧುನಿಕ ಜೀವನಶೈಲಿಯಿಂದ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಮಧುಮೇಹ, ರಕ್ತದ ಒತ್ತಡ ಇತ್ಯಾದಿ ಅಸಾಂಕ್ರಾಮಿಕ ರೋಗಗಳಿಗೆ ಸಮರ್ಥ ಚಿಕಿತ್ಸೆಗಳಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ರೋಗವೇ ಬರದಂತೆ ಕಾಪಾಡುವ ಪಂಚಕರ್ಮ, ದಿನಚರ್ಯ, ಶುಶ್ರೂಷೆ, ಆರೋಗ್ಯಕರ ಜೀವನಶೈಲಿ, ಆಹಾರ ಪದ್ಧತಿ, ಮಾನಸಿಕ ಚಿಕಿತ್ಸೆ ಹೀಗೆ, ಕೇವಲ ಚಿಕಿತ್ಸೆ ಅಲ್ಲ ಮಾನವ ಜನನದಿಂದ ಮರಣದವರೆಗೆ ಸುಖವಾಗಿ, ಹಿತವಾಗಿ ಬದುಕಲು ಅವಶ್ಯವಿರುವ ಎಲ್ಲಾ ತತ್ವಗಳೂ ಆಯುರ್ವೇದದಲ್ಲಿವೆ.
ಯೋಗ ಹಾಗೂ ಪ್ರಕೃತಿಚಿಕಿತ್ಸೆ: ಒತ್ತಡ ನಿರ್ವಹಣೆಗೆ ಯೋಗ ಪದ್ಧತಿಯಲ್ಲಿ ಹೇಳಿದ ಧ್ಯಾನ, ಪ್ರಾಣಾಯಾಮಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ. ಗಾಳಿ, ನೀರು, ಮಣ್ಣು, ಸೊಪ್ಪು, ತರಕಾರಿ ಹಣ್ಣುಗಳನ್ನೇ ಬಳಸಿ ಪ್ರಕೃತಿ ಔಷಧೀಯವಾಗಿ ವ್ಯಾಧಿಶಮನ ಮಾಡುವ ವಿಶಿಷ್ಟ ಪದ್ಧತಿ.
ಯುನಾನಿ: ಸಾಂಪ್ರದಾಯಿಕ ಸಸ್ಯ ಮತ್ತು ಅರಬ್ ಮೂಲಕ ವೈದ್ಯಪದ್ಧತಿಯಾದರೂ ನಮ್ಮ ನೆಲದ ಪದ್ಧತಿಯನ್ನು ನಮ್ಮ ವೈದ್ಯ ಪದ್ಧತಿಯಲ್ಲಿನ ಕಪ್ಪಿಂಗ್ ಥೆರಪಿ, ರಜಿಮಿನಲ್ ಥೆರಪಿಯಂತಹ ವಿಶಿಷ್ಟ ಚಿಕಿತ್ಸಾ ವಿಧಾನಗಳನ್ನು ಹೊಂದಿದೆ.
ಸಿದ್ಧ: ಸಸ್ಯಗಳμÉ್ಟೀ ಅಲ್ಲ ಲೋಹಗಳನ್ನೂ ಶುದ್ಧೀಕರಿಸಿ ಚಿಕಿತ್ಸೆಗೆ ಬಳಸಬಹುದೆಂದು ಜಗತ್ತಿಗೇ ತೋರಿಸಿ ಕೊಟ್ಟ ದಕ್ಷಿಣ ಭಾರತ ಮೂಲದ ಹೆಮ್ಮೆಯ ವೈದ್ಯಪದ್ಧತಿ ಇದು, ಸಿದ್ದ ವೈದ್ಯಪದ್ಧತಿಯಲ್ಲಿ ಇಂದು ಬಳಸುವ ಭಸ್ಮಗಳು ನ್ಯಾನೋ ತಂತ್ರಜ್ಞಾನವನ್ನು ಹೋಲುತ್ತವೆ. ಹಾಗೂ ಸೌವರಿಗ್ರಾಹಿಮಾಲಯದ ತಪ್ಪಲಿನ ನೇಪಾಳ ಮೂಲದ ಮೂಲಿಕಾ ವೈದ್ಯಪದ್ಧತಿ ಕ್ರಮೇಣ ಭಾರತಕ್ಕೂ ಜನಪ್ರಿಯತೆ ಪಡೆಯುತ್ತಿದೆ.
ಹೋಮಿಯೋಪತಿ: ಜರ್ಮನ್ಮೂಲದ ವೈದ್ಯಪದ್ಧತಿಯು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ ರೋಗಗಳ ಸಾರವರ್ಧಿಸಿ ಚಿಕ್ಕ ಚಿಕ್ಕ ಮಾತ್ರೆಗಳ ರೂಪದಲ್ಲಿ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ.
ಆಯುಷ್ ಪದ್ಧತಿಗಳಲ್ಲಿ ಕೇವಲ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಬೇಕಾದ ಎಲ್ಲಾ ಅಂಶಗಳನ್ನು ವಿವರಿಸಲಾಗಿದೆ. ಪರಿಪೂರ್ಣ ಆರೋಗ್ಯ ಬಯಸುವವರಿಗೆ ಆಯಷ್ ಚಿಕಿತ್ಸಾಪದ್ಧತಿಗಳು ಅತ್ಯುತ್ತಮ ಆಯ್ಕೆಯಾಗಿವೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್. ನಾಗಸಮುದ್ರ.