Breaking
Tue. Jan 7th, 2025

ಅನಾಮಧೇಯ ಕರೆಗಳಿಂದ ಎಚ್ಚರವಿರಲು ರೈತರಿಗೆ ಸಲಹೆ….!

ಶಿವಮೊಗ್ಗ : ಇತ್ತೀಚೆಗೆ ತಾಲ್ಲೂಕಿನಾದ್ಯಂತ ವಿವಿಧ ರೈತರಿಗೆ ಕೆಲವು ಅನಾಮಧೇಯ ಮತ್ತು ಅನಧಿಕೃತ ವ್ಯಕ್ತಿಗಳಿಂದ ನಾವು ಕೃಷಿ ಇಲಾಖೆಯಿಂದ ಕರೆ ಮಾಡುತ್ತಿದ್ದು, ಸ್ಪ್ರಿಂಕ್ಲರ್ ಸೆಟ್ ಮತ್ತು ಟಾರ್ಪಾಲಿನ್ ಅನ್ನು ನಿಮಗೆ ನೀಡಲಾಗುತ್ತದೆ, ಇದಕ್ಕೆ ನೀವು ಫೋನ್‌ಪೇ, ಅಥವಾ ಗೂಗಲ್ ಪೇ ಮೂಲಕ ಹಣವನ್ನು ಪಾವತಿಸಲು ತಿಳಿಸುತ್ತಿರುತ್ತಾರೆ. 

 ಸದರಿ ದೂರವಾಣಿ ಸಂಖ್ಯೆ 7259260962 ಟ್ರೂಕಾಲರ್‌ನಲ್ಲಿ China Sharnago ಕೃಷಿ ಇಲಾಖೆ ಎಂದು ತೋರಿಸುತ್ತಿದೆ. 

ಆದರೆ ವಾಸ್ತವವಾಗಿ ಕೃಷಿ ಇಲಾಖೆಯಿಂದ ಯಾವುದೇ ಸವಲತ್ತು ಪಡೆಯಬೇಕಾದರೆ ನಿಮ್ಮ ರೈತ ಸಂಪರ್ಕ ಕೇಂದ್ರಗಳಿಗೆ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಜೊತೆಗೆ ಅರ್ಹರಿದ್ದಲ್ಲಿ ಇಲಾಖೆಯಿಂದ ಹಣ ವರ್ಗಾವಣೆಗೆ ಪತ್ರವನ್ನು ಪಡೆದು ರೈತರು ತಮ್ಮ ಖಾತೆಯಿಂದ ನೇರವಾಗಿ ಸಂಸ್ಥೆಯ ಖಾತೆಗೆ ರೈತರ ವಂತಿಕೆ ಮೊತ್ತವನ್ನು ಪಾವತಿಸಿ, ನಂತರ ಪಾವತಿಸಿದ ದಾಖಲೆಯನ್ನು ಸಲ್ಲಿಸಿದ ನಂತರವೇ ನಿಮಗೆ ಸೌಲಭ್ಯವನ್ನು ರೈತ ಸಂಪರ್ಕ ಕೇಂದ್ರದಲ್ಲಿಯೇ ವಿತರಿಸಲಾಗುವುದು.

 ಆದ್ದರಿಂದ ಈ ರೀತಿಯ ಅನುಮಾನಾಸ್ಪದ ಕರೆಗಳು ಬಂದಾಗ ಯಾವುದೇ ರೀತಿಯಾಗಿ ಹಣ ವರ್ಗಾವಣೆಯನ್ನು ವ್ಯಕ್ತಿಗೆ ಮಾಡಬಾರದು ಹಾಗೂ ಅಂತಹವರ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಪೋಲೀಸ್ ಇಲಾಖೆಯ ಸೈಬರ್ ಕ್ರೈಮ್ ವಿಭಾಗಕ್ಕೆ (ಸಂಪರ್ಕ ಸಂಖ್ಯೆ 1930) ಕರೆಮಾಡಿ ದೂರನ್ನು ಸಲ್ಲಿಸಬೇಕೆಂದು ಶಿವಮೊಗ್ಗ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *