ಬಳ್ಳಾರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜ.08 ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿಯ ಸಭೆಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್‌ಕುಮಾರ್ ಅವರು ಚಾಲನೆ ನೀಡಿದರು.
ಸಭೆಯಲ್ಲಿ ಕೌಟುಂಬಿಕ ದೌರ್ಜನ್ಯಯಿಆದ ಮಹಿಳೆಯರ ಸಂರಕ್ಷಣೆಯ ಅಧಿನಿಯಮ 2005 ನಿಯಮ 2006ರ ವಿಷಯ, ಕೇಂದ್ರ ಸರ್ಕಾರದ ‘ಸಖಿ’ ಒನ್ ಸ್ಟಾಪ್ ಸೆಂಟರ್, ಬಾಲ್ಯ ವಿವಾಹ ನಿಷೇಧ ಕೋಶ, ಬಾಲಕಿಯರ ವಸತಿ ನಿಲಯ, ಸಾಂತ್ವನ ಯೋಜನೆ, ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಯೋಜನೆ, ರಾಜ್ಯ ಮಹಿಳಾ ನಿಲಯ ವ್ಯವಸ್ಥಾಪಕರ ಸಮಿತಿ, ಉದ್ಯೋಗಸ್ಥ ಮಹಿಳಾ ವಸತಿ ಯೋಜನೆ ಮತ್ತು ಮಹಿಳಾ ಸಬಲೀಕರಣ ಘಟಕ ಸೇರಿದಂತೆ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಅವರು ನಿರ್ಧರಿಸಿದ್ದಾರೆ .