ಶಿವಮೊಗ್ಗ,07 ಹೆಚ್.ಆರ್. ಶ್ರೀಧರ್ ಇವರು 1ನೇ ಎದುರುದಾರ ಶಾಖಾ ವ್ಯವಸ್ಥಾಪಕರು, ಎಲ್‌ಐಸಿ ಆಫ್ ಇಂಡಿಯಾ ತೀರ್ಥಹಳ್ಳಿ ಶಾಖೆ ಮತ್ತು 2ನೇ ಎದುರುದಾರ ವ್ಯವಸ್ಥಾಪಕರು ಯೂನಿಯನ್ ಬ್ಯಾಂಕ್ ತೀರ್ಥಹಳ್ಳಿ ಇವರ ವಿರುದ್ದ ಸೇವಾ ನ್ಯೂನ್ಯತೆ ಕುರಿತು ದೂರು ಸಲ್ಲಿಸಿದ್ದು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾ ನ್ಯೂನ್ಯತೆ ಪರಿಗಣಿಸಿ, ದೂರುದಾರರಿಗೆ ಸೂಕ್ತ ಪರಿಹಾರ ನೀಡಲು ಆದೇಶಿಸಿದೆ.
ದೂರುದಾರರು 1 ನೇ ಎದುರುದಾರರಿಂದ ಜೀವನ್ ಆರೋಗ್ಯ ಪಾಲಿಸಿಯನ್ನು ಪಡೆದಿದ್ದು ಸದರಿ ಪಾಲಿಸಿಯು ದಿ: 24-11-2012 ರಿಂದ 24-01-2044 ರವರೆಗೆ ಚಾಲ್ತಿಯಲ್ಲಿರುತ್ತದೆ. ಪಾಲಿಸಿಯ ಮಾಸಿಕ ವಂತಿಕೆಯನ್ನು ಪ್ರತಿ ತಿಂಗಳು 24 ನೇ ತಾರೀಕಿನಂದು 2ನೇ ಎದುರುದಾರರು ದೂರುದಾರರ ಉಳಿತಾಯ ಖಾತೆಯಿಂದ ಇಸಿಎಸ್ ಮೂಲಕ ಕಟಾಯಿಸಿ ಪಾವತಿಸಲು ದೂರುದಾರರು ಒಪ್ಪಿಗೆ ಕೊಟ್ಟಿರುತ್ತಾರೆ. ಅದರಂತೆ 2ನೇ ಎದುರುದಾರರು ಪ್ರತಿ ಮಾಹೆ 24ನೇ ತಾರೀಕಿನಂದು ವಿಮಾ ವಂತಿಕೆಯನ್ನು ಕಟಾಯಿಸಿ 1ನೇ ಎದುರುದಾರರಿಗೆ ಜಮಾ ಮಾಡಬೇಕಾಗಿರುತ್ತದೆ.
ದೂರುದಾರರು ದಿ: 30-1-2020 ರಂದು ಅನಾರೋಗ್ಯದ ನಿಮಿತ್ತ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ನಂತರ 1ನೇ ಎದುರುದಾರರಿಗೆ ವೈದ್ಯಕೀಯ ಚಿಕಿತ್ಸೆ ಪಡೆದ ಎಲ್ಲಾ ದಾಖಲೆಗಳೊಂದಿಗೆ ಚಿಕಿತ್ಸಾ ವೆಚ್ಚವನ್ನು ಪಾವತಿಸಲು ಕೋರಿದ್ದು, 1ನೇ ಎದುರುದಾರರು ತಮ್ಮ ಪಾಲಿಸಿಯ ವಂತಿಕೆ ಜಮಾ ಆಗಿಲ್ಲವೆಂದು ಅರ್ಜಿಯನ್ನು ತಿರಿಸ್ಕರಿಸುತ್ತಾರೆಂದು ದೂರನ್ನು ಸಲ್ಲಿಸಿರುತ್ತಾರೆ.
ಆಯೋಗವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಹಾಗೂ ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, 2 ಎನೇ ಎದುರುದಾರರು ದೂರುದಾರರ ಖಾತೆಯಲ್ಲಿ ಸಂಬAಧಿಸಿದ ದಿನಾಂಕದAದು ಹಣವಿದ್ದರೂ ಸಹ ಇಸಿಎಸ್ ಮೂಲಕ ವಿಮಾ ವಂತಿಕೆಯನ್ನು ಕಟಾಯಿಸಿ 1ನೇ ಎದುರುದಾರರಿಗೆ ಪಾವತಿಸದೆ ಸೇವಾಲೋಪ ಎಸಗಿರುವುದರಿಂದ 2ನೇ ಎದುರುದಾರರಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ದ ಪರ‍್ಯಾದನ್ನು ಭಾಗಶಃ ವೆಚ್ಚರಹಿತವಾಗಿ ಪುರಸ್ಕರಿಸಿದೆ.
2ನೇ ಎದುರುದಾರರು ದೂರುದಾರರಿಗೆ ವೈದ್ಯಕೀಯ ವೆಚ್ಚ ರೂ.1,00,000 ಗಳನ್ನು ದಿ: 07-02-2024 ರಿಂದ ಶೇ.9 ಬಡ್ಡಿಯನ್ನು ಸೇರಿಸಿ ಈ ಆದೇಶವಾದ ದಿನಾಂಕದಿAದ 45 ದಿನಗಳ ಒಳಗಾಗಿ ಪಾವತಿಸುವುದು. ತಪ್ಪಿದಲ್ಲಿ ಶೇ.12 ಬಡ್ಡಿಯನ್ನು ಸದರಿ ಮೊತ್ತಕ್ಕೆ ಈ ಆದೇಶವಾದ ದಿನಾಂಕದಿAದ ಪಾವತಿಸಬೇಕೆಂದು ಹಾಗೂ 1ನೇ ಎದುರುದಾರರು ಯಾವುದೇ ಸೇವಾ ನ್ಯೂನ್ಯತೆ ಎಸಗಿಲ್ಲವಾದ್ದರಿಂದ ಸದರಿಯವರ ವಿರುದ್ದ ಅರ್ಜಿಯನ್ನು ವಜಾಗೊಳಿಸಲಾಗಿರುತ್ತದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರುಗಳಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು 2024 ರ ಡಿ.31 ರಂದು ಆದೇಶಿಸಿದೆ.