ಚಿತ್ರದುರ್ಗ
ಚಿತ್ರದುರ್ಗ ಹಾಗೂ ಹಳಿಯೂರು ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಹಳಿ ಮೇಲೆ ಅಪರಿಚಿತ ಶವ ಪತ್ತೆಯಾಗಿದೆ. ಈ ಕುರಿತು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಅಪರಿಚಿತ ವ್ಯಕ್ತಿ ಸುಮಾರು 41 ರಿಂದ 45 ವರ್ಷದವನಾಗಿದ್ದು, 5.7 ಅಡಿ ಎತ್ತರ, ಕಪ್ಪು ಮೈ ಬಣ್ಣ, ಸಾಧಾರಣ ಮೈ ಕಟ್ಟು, ಕೊಲು ಮುಖ ತಲೆಯಲ್ಲಿ ಸು.3 ರಿಂದ 4 ಇಂಚು ಬಿಳಿ ಮಿಶ್ರಿತ ಕಪ್ಪು ತಲೆ ಕೂದಲು, ಕುರುಚಲು ಗಡ್ಡ ಮತ್ತು ಮೀಸೆ ಇರುತ್ತದೆ. ತುಂಬು ತೋಳಿನ ಪಿಂಗ್ ಬಣ್ಣದ ಫ್ಲೈನ್ ಶರ್ಟ್, ಬಿಳಿ ಬಣ್ಣದ ಬನಿಯನ್, ನೀಲಿ ಬಣ್ಣದ ಅಂಡವೇರ್ ಧರಿಸಿರುತ್ತಾರೆ.
ಮೃತ ವ್ಯಕ್ತಿಯ ಗುರುತು ಪತ್ತೆಯಾದವರು ದಾವಣಗೆರೆ ರೈಲ್ವೇ ಪೊಲೀಸ್ ದೂರವಾಣಿ ಸಂಖ್ಯೆ 08192-259643 ಅಥವಾ ಮೊಬೈಲ್ 9480802123 ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ 080-22871291 ಕರೆ ಮಾಡುವಂತೆ ಚಿತ್ರದುರ್ಗ ರೈಲ್ವೆ ಪೊಲೀಸ್ ಉಪಠಾಣೆ ಉಪ ಠಾಣಾಧಿಕಾರಿ ತಿಳಿಸಿದ್ದಾರೆ.