ಹುಬ್ಬಳ್ಳಿ(ಜ.14): ಗೆಳತಿಯ ಜಗಳಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಉಣಕಲ್ ನಲ್ಲಿ ನಡೆದಿದೆ. ನವನಗರ ಹುಬ್ಬಳ್ಳಿ ನಿವಾಸಿ ಸಂದೇಶ ಉಣಕಲ್ (27) ಆತ್ಮಹತ್ಯೆ ಮಾಡಿಕೊಂಡವರು. ಶನಿವಾರ ಮನೆಯಿಂದ ನಾಪತ್ತೆಯಾಗಿದ್ದ ಸಂದೇಶ್ ಉಣಕಲ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಸಂಜನಾ ಕಾರಣ ಎಂದು ನನ್ನ ತಾಯಿ ವಾಯ್ಸ್ ಮೆಸೇಜ್ ಕಳುಹಿಸಿದ್ದು, ಆತ ಸಾವನ್ನಪ್ಪಿದ್ದಾನೆ. ಆತ್ಮಹತ್ಯೆಗೂ ಮುನ್ನ ತನ್ನ ತಾಯಿಗೆ ಧ್ವನಿ ಸಂದೇಶ ರವಾನಿಸಿ ನನ್ನ ಸಾವಿಗೆ ಸಂಜನಾ (ಹುಡುಗಿ) ಕಾರಣ ಎಂದು ಹೇಳಿದ್ದಾನೆ.
ಹುಬ್ಬಳ್ಳಿಯ ನವನಗರ ನಿವಾಸಿ ಸಂದೇಶ್ , ಮೋಟಾರ್ ಸೈಕಲ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಶನಿವಾರ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದರು. ಕುಟುಂಬಸ್ಥರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಇದೀಗ ಸಂದೇಶ್ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಆತ್ಮಹತ್ಯೆಗೂ ಮುನ್ನ ತನ್ನ ಗೆಳತಿಯೊಂದಿಗೆ ಖಾಸಗಿ ವಿಡಿಯೋಗಳು, ವಾಟ್ಸಾಪ್ ಚಾಟ್‌ಗಳು, ಸಂಭಾಷಣೆಗಳು ಮತ್ತು ಫೋಟೋಗಳನ್ನು ತನ್ನ ಸ್ನೇಹಿತರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾನೆ. ನನ್ನ ಸಾವಿಗೆ ಸಂಜನಾ ಕಾರಣ ಎಂದು ತಾಯಿಗೆ ವಾಯ್ಸ್ ಮೆಸೇಜ್ ಕೂಡ ಕಳುಹಿಸಿದ್ದಾರೆ. ಮಗನನ್ನು ಕಳೆದುಕೊಂಡ ತಾಯಿಯ ದುಃಖ ಮುಗಿಲು ಮುಟ್ಟಿದೆ.
ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂದೇಶ್ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ಸಾವಿಗೆ ತನ್ನ ಗೆಳತಿಯೇ ಕಾರಣ ಎಂದು ಹೇಳಿದ್ದು ಯಾಕೆ? ಅವರ ನಡುವೆ ಜಗಳ ನಡೆದಿದೆಯೇ? ಅಥವಾ ಇನ್ನೇನಾದರೂ ಸಂಭವಿಸಿದೆಯೇ? ಎಂಬ ಅನುಮಾನಗಳು ಮೂಡಿದ್ದು, ಪೊಲೀಸರ ತನಿಖೆಯ ಭಾಗವಾಗಿ ಸಂದೇಶ್ ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದು ಬರಬೇಕಿದೆ.