ಶಬರಿಮಲೆ: ಸಂಕ್ರಾಂತಿಯಂದು ಅಯ್ಯಪ್ಪ ತನ್ನ ಭಕ್ತರಿಗೆ ಜ್ಯೋತಿಯ ರೂಪದಲ್ಲಿ ದರ್ಶನ ನೀಡಿದ್ದಾರೆ.
ಸಂಜೆ 6:44 ಕ್ಕೆ ಅಯ್ಯಪ್ಪ ದೇವಸ್ಥಾನದ (ಶಬರಿಮಲೆ) ಎದುರಿನ ಪೊನ್ನಂಬಲಮೇಡುವಿನಲ್ಲಿ ಜ್ಯೋತಿ ದರ್ಶನ. ಅಂದು ಬಹು ಭಕ್ತರು ಅಯ್ಯಪ್ಪನ ಭಕ್ತಿಗೀತೆ ಹಾಡುತ್ತಾ ಮಕರ ಜ್ಯೋತಿಯ ದರ್ಶನ ಪಡೆದರು.
ಮಕರ ಸಂಕ್ರಾಂತಿ ನಿಮಿತ್ತ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪಂದಳ ರಾಜ ಮನೆತನದಿಂದ ತಂದ ಆಭರಣಗಳಿಂದ ಅಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಯಿತು. ಮಹಾಮಂಗಳಾರತಿ ವೇಳೆ ಅಯ್ಯಪ್ಪ ಭಕ್ತರಿಗೆ ಜ್ಯೋತಿಯ ರೂಪದಲ್ಲಿ ದರ್ಶನ.
ಭಕ್ತಾದಿಗಳ ಆಹಾರ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಲು, ನ್ಯಾಯಾಲಯ ಮತ್ತು ಸುತ್ತಮುತ್ತಲಿನ ಭದ್ರತೆಯನ್ನು ಒದಗಿಸಲಾಗಿದೆ.