ಲಖನೌ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಜೀವ ದಹನ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಘಟನೆ ನಡೆದಿದೆ.
ಭಾನುವಾರ ಮುಂಜಾನೆ ಕುಟುಂಬದ ಸದಸ್ಯರು ಮಲಗಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಗುಲ್ಬಹಾರ್ (32 ವರ್ಷ) ಮತ್ತು ಆಕೆಯ ಇಬ್ಬರು ಅಪ್ರಾಪ್ತ ಪುತ್ರರು ಸಾವನ್ನಪ್ಪಿದ್ದಾರೆ. ಘಟನೆಯಿಂದ ಅದೇ ಮನೆಯಲ್ಲಿ ವಾಸವಿದ್ದ ಸಂಬಂಧಿಯೊಬ್ಬರ ಪುತ್ರನೂ ಮೃತಪಟ್ಟಿದ್ದಾನೆ. ಮಹಿಳೆಯ ಪತಿ ಶಹನವಾಜ್‌ಗೆ ಯಾವುದೇ ಗಾಯವಾಗಿಲ್ಲ.