Breaking
Mon. Jan 20th, 2025

ನೂತನ ಬಸ್ ಪಾಸ್ ಪಡೆಯಲು ಹಾಗೂ ಹಾಲಿ ಪಾಸುಗಳ ನವೀಕರಣಕ್ಕಾಗಿ 2025ರ ಫೆ.28 ರವರೆಗೆ ಅವಕಾಶ…..!

ಚಿತ್ರದುರ್ಗ : 2024-25ನೇ ಸಾಲಿನಲ್ಲಿ ಹೊಸದಾಗಿ, ನವೀಕರಣದ ವಿಕಲಚೇತನರ ರಿಯಾಯಿತಿ ಬಸ್‍ಪಾಸ್‍ಗಾಗಿ ಆನ್‍ಲೈನ್‍ನಲ್ಲಿ ಸರ್ಕಾರ ನಿಗಧಿಪಡಿಸಿರುವ ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮಗಳು ಸರ್ಕಾರದ ನಿರ್ದೇಶನದಂತೆ ಅರ್ಜಿ ಸಲ್ಲಿಸುವ ವಿಕಲಚೇತನ ಫಲಾನುಭವಿಗಳಿಗೆ ರಿಯಾಯಿತಿ ಬಸ್‍ಪಾಸ್‍ಗಳನ್ನು ವಿತರಿಸುತ್ತಿವೆ. ನೂತನ ಬಸ್ ಪಾಸ್ ಪಡೆಯಲು ಹಾಗೂ ಹಾಲಿ ಪಾಸುಗಳ ನವೀಕರಣಕ್ಕಾಗಿ 2025ರ ಫೆ.28 ರವರೆಗೆ ಅವಕಾಶ ನೀಡಿದೆ.

ವಿಕಲಚೇತನರು ಖಾಸಗಿ ಕಂಪ್ಯೂಟರ್ ಸೆಂಟರ್‍ಗಳಲ್ಲಿ ಹೆಚ್ಚಿನ ಸೇವಾಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸುತ್ತಿರುವುದು. ಇದರಿಂದ ವಿಕಲಚೇತನರಿಗೆ ಆರ್ಥಿಕ ತೊಂದರೆಯಾಗುತ್ತಿರುವುದು ಕಂಡು ಬಂದಿರುತ್ತದೆ.

ಆದ್ದರಿಂದ ಜಿಲ್ಲೆಯ ವಿಕಲಚೇತನರು ಹೊಸದಾಗಿ, ನವೀಕರಣದ ಬಸ್‍ಪಾಸ್‍ಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮ ಒನ್ ಕೇಂದ್ರಗಳು ಹಾಗೂ ನಗರ ವ್ಯಾಪ್ತಿಯಲ್ಲಿರುವ ಕರ್ನಾಟಕ ಒನ್ ಕೇಂದ್ರಗಳಲ್ಲಿ ರೂ.25 ಸೇವಾ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *