ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಸಶಕ್ತ ಭಾರತ ನಿರ್ಮಾಣಕ್ಕೆ ವಿವೇಕಾನಂದರು ಆದರ್ಶಪ್ರಾಯ: ವಿವೇಕಾನಂದ.ಹೆಚ್.ಕೆ
ಬಳ್ಳಾರಿ : ಆಧುನಿಕ ಮತ್ತು ಸಶಕ್ತ ಭಾರತ ನಿರ್ಮಾಣ ಮಾಡುವಲ್ಲಿ ಸ್ವಾಮಿ ವಿವೇಕಾಂದರ ಜ್ಞಾನ ತಿಳುವಳಿಕೆ ಮತ್ತು ಪರಿಹಾರೋಪಾಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಬೆಂಗಳೂರಿನ ಖ್ಯಾತ ಅಂಕಣಕಾರರು, ಚಿಂತಕರಾದ ವಿವೇಕಾನಂದ ಹೆಚ್.ಕೆ ಅವರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಮತ್ತು ರಾಷ್ಟಿçÃಯ ಸೇವಾ ಯೋಜನೆ ವಿಶ್ರೀಕೃ ವಿಶ್ವವಿದ್ಯಾಲಯದ ಸಹಯೋಗದಲ್ಲಿ “ಸ್ವಾಮಿ ವಿವೇಕಾನಂದ ಸಮಗ್ರ ಚಿಂತನೆಗಳು ಮತ್ತು ಯುವ ಭಾರತ” ಕುರಿತು ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಮಂಗಳವಾರ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದ ಭಾರತ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಅಪಾರವಾಗಿದೆ. ಹೆಚ್ಚು ಯುವ ಸಮುದಾಯ ಹೊಂದಿರುವ ಭಾರತ ಇಂದು ಅಪಾಯದಲ್ಲಿದೆ. ಮಾನವಿಯ ಮೌಲ್ಯಗಳು, ವೈಚಾರಿಕ ಚಿಂತನೆಗಳು ಹಾಗೂ ಸಂಬAಧಗಳು ಇಂದು ವ್ಯವಹಾರಿಕವಾಗಿವೆ. ಮಾನವಿಯ ವಿರುದ್ದದ ಮೌಲ್ಯಗಳು ಸಮಾಜದಲ್ಲಿ ಸ್ಥಾನ ಪಡೆಯುತ್ತಿವೆ. ನಿಮ್ಮನ್ನು ನೀವು ಅನುಕರಿಸಿ, ತಂದೆ, ತಾಯಿ ಮತ್ತು ಗುರುಗಳನ್ನು ಆದರ್ಶಪ್ರಾಯವಾಗಿ ಆಗಿ ಸ್ವೀಕರಿಸಿ ಪ್ರಬುದ್ದರಾಗಬೇಕು ಎಂದು ಕರೆ ನೀಡಿದರು.
ಬೆಂಗಳೂರು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರೊ.ಅನುರಾಧ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ಅಮೇರಿಕಾದ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮನುಷ್ಯನಲ್ಲಿರುವ ಅಗಾಧ ಶಕ್ತಿ ಕುರಿತು ಭಾಷಣ ಮಾಡಿದರು. ಭಾರತದ ಚಿಂತನೆಗಳನ್ನು, ವೈಚಾರಿಕತೆಯನ್ನು ಸೂಕ್ಷö್ಮ ಉದಾರಣೆಗಳನ್ನು ನೀಡುತ್ತ ಜಗತ್ತಿಗೆ ಪರಿಚಯಿಸಿದರು. ಭಾರತೀಯ ಸಂಸ್ಕೃತಿ, ವೈಚಾರಿಕತೆ, ಆವಿಷ್ಕಾರ, ವೈದಿಕ ಕೊಡುಗೆಗಳನ್ನು ವಿಶ್ವವೇ ಮೆಚ್ಚಿಕೊಂಡಿದೆ. ಪ್ರಪಂಚದ ಹಲವು ಮುಂದುವರೆದ ರಾಷ್ಟçಗಳ ಉನ್ನತ ಸ್ಥಾನಗಳ ಚುಕ್ಕಾಣಿ ಹಿಡಿದಿರುವುದು ಭಾರತೀಯರೆ ಎಂದರು.
ಸ್ವಯA ವಿಶ್ವಾಸದ ಬಲದಿಂದ ವಿಶ್ವವನ್ನೆ ಬದಲಾಯಿಸಬಹುದು ಎನ್ನುವ ಸಂದೇಶವನ್ನು ವಿವೇಕಾನಂದರು ಜಗತ್ತಿಗೆ ಸಾರಿದರು ಎಂದು ತಿಳಿಸಿದರು.
ವಿವಿಯ ಕುಲಪತಿಗಳಾದ ಎಂ.ಮುನಿರಾಜು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತವು 2047ರ ಹೊತ್ತಿಗೆ ಯುವಭಾರತವಾಗಿ ಪರಿವರ್ತನೆಯಾಗಲಿದೆ. ಭಾರತದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುತ್ತಿಲ್ಲ. ಯುವ ಸಮುದಾಯ ಉದ್ಯೋಗಕ್ಕೆ ಸೀಮಿತವಾಗದೆ ಉದ್ಯೋಗ ಸೃಷ್ಟಿಸುವಂತಾಗಲಿ. ದ್ವೇಷ ಮನೋಭಾವನೆ ಬಿಟ್ಟು ತಂದೆ ತಾಯಿ, ಗುರುವನ್ನು ಗೌರವಯುತವಾಗಿ ಕಾಣಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಡಾ. ಹೆಚ್. ಶಿವಪ್ರಸಾದ್ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಹಾಗೂ ಕಾರ್ಯಕ್ರಮ ಸಂಯೋಜನಾಧಿಕಾರಿ ರಾ.ಸೇ.ಯೋ. ಕೋಶದ ಡಾ ಕುಮಾರ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಚಿಂತಕರಾದ ಟಿ.ಪ್ರಸನ್ನ, ವಿವಿಯ ಕುಲಸಚಿವ ಎಸ್.ಎನ್.ರುದ್ರೇಶ್ ಸೇರಿದಂತೆ ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎರಡು ದಿನಗಳ ವಿಚಾರ ಸಂಕಿರಣದಲ್ಲಿ ರಾಜ್ಯದ 8 ವಿಶ್ವವಿದ್ಯಾಲಯಗಳ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.