ನ್ಯಾ.ಎಂ.ವಿಜಯ್ ಯುವಕರಿಗೆ ಸಲಹೆ ಕಾನೂನು ಬಾಹಿರ ಸಂಗತಿಗಳ ಕಡೆ ಗಮನ ಹರಿಸಿದಿರಿ
ಚಿತ್ರದುರ್ಗ : ಹದಿ ಹರೆಯದ ಯುವಕ ಯುವತಿಯರಿಗೆ ಸಿಲುಕಿ ಕಾನೂನು ಸಂಘರ್ಷಕ್ಕೆ ಒಳಗಾಗುವ ಸಂಗತಿಗಳು ಹೆಚ್ಚಾಗುತ್ತಿವೆ. ಯುವಕರು ಕಾನೂನು ಬಾಹಿರ ಸಂಗತಿಗಳ ಕಡೆ ಗಮನ ಹರಿಸಿದರು, ವಿದ್ಯಾಭ್ಯಾಸದ ಕಡೆ ಹೆಚ್ಚಿನ ಒಲವು ತೋರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನ ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ, ನೆಹರು ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ರಾಷ್ಟಿçÃಯ ಸೇವಾ ಯೋಜನೆ ಘಟಕದಲ್ಲಿ, ಮಂಗಳವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ರಾಷ್ಟಿçÃಯ ಯುವ ದಿನಾಚರಣೆ ಮತ್ತು ಕಾನೂನು ಅರಿವು ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ದೇಶದ ಜನಸಂಖ್ಯೆಯ ಶೇ.29ರಷ್ಟು ಯುವಜನರಿದ್ದಾರೆ. 15 ರಿಂದ 29 ವರ್ಷದ ಒಳಗಿರುವವರನ್ನು ಯುವಕರು ಎಂದು ಕರೆಯುತ್ತಾರೆ. ದೇಶದ ಪ್ರಗತಿ ಹಾಗೂ ಅಭಿವೃದ್ಧಿಗೆ ಯುವಜನರೇ ಮೂಲವಾಗಿದ್ದಾರೆ. ಸ್ವಾಮಿ ವಿವೇಕಾನಂದರು ಶಿಕ್ಷಣ ಯುವಕರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಜ.12 ರಂದು ರಾಷ್ಟಿçÃಯ ಯುವ ದಿನಾಚರಣೆ ಆಚರಿಸಬೇಕಿತ್ತು. ಕಾರಣಾಂತರಗಳಿಆದ ಇಂದು ಆಚರಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಜೀವನ ಯುವಕರಿಗೆ ಮಾದರಿ ಹಾಗೂ ಸ್ಪೂರ್ತಿಯಾಗಿದೆ. ಈ ಬಾರಿಯ ಯುವ ದಿನಾಚರಣೆ ಘೋಷವಾಕ್ಯ ಯುವಜನರ ಶಕ್ತಿಯನ್ನು ಸಂಭ್ರಮಿಸೋಣ ಎನ್ನದೆ. ಯುವಜನರ ಶಕ್ತಿ ಸದ್ಭಳಕೆಯಾದರೆ ಕುಟುಂಬ, ನಾಡು, ದೇಶ ಸುಭೀಕ್ಷ ಸಮಾರಂಭ.
ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣದ ಆರೋಪದಲ್ಲಿ ಸಿಲುಕಿ ಬಂಧನಕ್ಕೆ ಒಳಗಾದವರ ಮೇಲೆ ಹೆಚ್ಚಿನವರು ಯುವಕರೇ ಆಗಿರುವುದು ರ್ದುದೈವದ ವಿಷಯವಾಗಿದೆ. ಪೋಕ್ಸೋ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಎನ್.ಡಿ.ಪಿ.ಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್) ಸೈಬರ್ ಅಪರಾಧ ಹಾಗೂ ಅಪಘಾತಗಳಲ್ಲಿ ಯುವಕರು ಹೆಚ್ಚಿನ ತೊಂದರೆಗೆ ಸಿಲುಕುತ್ತಿದ್ದಾರೆ. ಇಂತಹ ಯುವಕರ ತಂದೆ ತಾಯಿಗಳು ಅಸಹಾಯಕರಾಗಿ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಕಾನೂನುಗಳ ಅರಿವು ಹೊಂದಿ ಸೂಕ್ಷ್ಮವಾಗಿ ವರ್ತಿಸಬೇಕು. ಚಿತ್ರದುರ್ಗ ಜಿಲ್ಲೆ ಬಾಲ್ಯವಿವಾಹಗಳ ಪ್ರಕರಣಗಳು ಹೆಚ್ಚಿವೆ. ಇದು ಅತ್ಯಂತ ಅಪಮಾನಕರ ಸಂಗತಿಯಾಗಿದೆ. ಹಿನ್ನಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶಿಕ್ಷಣ, ಮಹಿಳಾ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾ.ಎಂ.ವಿಜಯ್ ಕಾರ್ಯಕ್ರಮ ಆಯೋಜಿಸಿದೆ.
ಜಿಲ್ಲಾ ಯುವಜನ ಅಧಿಕಾರಿ ಸುಹಾಸ್.ಎನ್ ಮಾತನಾಡಿ, ಶ್ರೇಷ್ಠ ಆಧ್ಯಾತ್ಮಿಕ ನಾಯಕ ಹಾಗೂ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು 1863 ಜನವರಿ 12 ರಂದು ಜನಿಸಿದರು. ಆದ್ದರಿಂದ ಈ ದಿನವನ್ನು ರಾಷ್ಟಿçÃಯ ಯುವದಿನವಾಗಿ ಆಚರಿಸಲಾಗುತ್ತಿದೆ. ಯುವ ಜನರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ಯುವನರು ಮೊಬೈಲ್ ಗೀಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಲಹರಣ ಮಾಡದೇ ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು. ರೀಲ್ಸ್ನಲ್ಲಿ ಪ್ರಖ್ಯಾತರಾದವರೇ ಆದರ್ಶ ವ್ಯಕ್ತಿಗಳಲ್ಲ. ದೇಶದ ನಿರುದ್ಯೋಗದ ಸಮಸ್ಯೆ ಹೆಚ್ಚಿದೆ. ಓದುವಾಗಲೇ ವೃತ್ತಿಯ ಬಗ್ಗೆ ಯೋಚಿಸಿ ಕೌಶಲ್ಯಗಳನ್ನು ತಿಳಿದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಎಐ ಮತ್ತು ಆಟೋಮೇಷನ್ ಲರ್ನಿಂಗ್ ಪ್ರವರ್ಧಮಾನಕ್ಕೆ ಬರಲಿದೆ, ಇದರಲ್ಲಿ ಹೆಚ್ಚಿನ ಕೌಶಲ್ಯ ಗಳಿಸಲು ಪ್ರಯತ್ನಿಸುವಂತೆ ಕಿವಮಾತು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿದಾರ ಗಜೇಂದ್ರ ಎಂನಾಯ್ಕ್ ಅವರು ಮಾತನಾಡಿದರು. ಪ್ರಾಂಶುಪಾಲ ರಾಘವೇಂದ್ರಚಾರ್.ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಮೇಶ್, ಇತರ ಉಪನ್ಯಾಸಕರು, ವಿದ್ಯಾರ್ಥಿಗಳು.