Breaking
Wed. Jan 22nd, 2025

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆ: ನೇರ ಫೋನ್ ಇನ್ ಕಾರ್ಯಕ್ರಮ….!

ಚಿತ್ರದುರ್ಗ : ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಉನ್ನತೀಕರಣದ ಹಿನ್ನಲೆಯಲ್ಲಿ ನುರಿತ ವಿಷಯಕ್ಕೆ ಸಂಬಂಧಿಸಿದ ವಿಷಯವಾರು ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಮತ್ತು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ನೇರ ಫೋನ್ ಇನ್ ರೂಪಿಸಿ.

ಇದೇ ಜ.24ರಂದು ಬೆಳಗ್ಗೆ 10ಕ್ಕೆ ಚಿತ್ರದುರ್ಗವಾಣಿಯ ನೇರ ಫೋನ್ ಇನ್ ಕಾರ್ಯಕ್ರಮದ ಚರ್ಚೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್, ಶಿಕ್ಷಣಾಧಿಕಾರಿ ಬಿ.ಸಿ.ಎನ್.ಸಿದ್ದಪ್ಪ, ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ.ಆರ್. ತಿಪ್ಪೇಸ್ವಾಮಿ, ಶಿಕ್ಷಣ ಉಪಯೋಜನ ಸಮನ್ವಯಾಧಿಕಾರಿ ಸಿ. ವೆಂಕಟೇಶ್ ಹಾಗೂ ವಿಷಯ ಪರಿವೀಕ್ಷಕ ಕೆ.ಜಿ.ಪ್ರಶಾಂತ್ ಕೆ.ಜಿ ಭಾಗವಹಿಸಿದ್ದರು.

20 ಮಾರ್ಚ್ ಮಾಹೆಯಲ್ಲಿ ನಡೆಯುವ ಎಸ್‌.ಎಸ್.ಎಲ್‌.ಸಿ ಪರೀಕ್ಷೆಗೆ ಜಿಲ್ಲೆಯ ಎಲ್ಲಾ ಪೂರ್ವಯೋಜಿತ ಸಂಸ್ಥೆಗಳು 5 ಆಕಾಶವಾಣಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಸಿದ್ಧತೆ, ಪ್ರಾಜಿತ ನೇರ ಫೋನ್ ಕಾರ್ಯಕ್ರಮವು ಪ್ರತಿ ಬುಧವಾರ ಬೆಳಿಗ್ಗೆ 10 ರಿಂದ 11 ರವರೆಗೆ ಪ್ರಸಾರವಾಗುತ್ತದೆ. ಈ ಸರಣಿ ಕಾರ್ಯಕ್ರಮವು ಇದೇ ಜನವರಿ 29 ರಿಂದ ಆರಂಭವಾಗಿ ಮಾರ್ಚ್ 19 ರವರೆಗೆ ಬಿತ್ತರವಾಗುವುದು.

ಈ ಸರಣಿ ಕಾರ್ಯಕ್ರಮವು 102.6 ಮೆಗಾ ಹಡ್ಜ್‌ಗಳ ತರಂಗಾಂತರಗಳಲ್ಲಿ ಆಕಾಶವಾಣಿ ಚಿತ್ರದುರ್ಗ ಕೇಂದ್ರದಿಂದ ಪ್ರಸಾರವಾಗುತ್ತದೆ. ಈ ಕಾರ್ಯಕ್ರಮವನ್ನು ಪ್ರಪಂಚದಾದ್ಯಂತ ಆಕಾಶವಾಣಿ ಚಿತ್ರದುರ್ಗ ಲೈವ್ ಸ್ಟ್ರೀಮಿಂಗ್ ಮತ್ತು ಪ್ರಸಾರ ಭಾರತಿ ಸುದ್ದಿಗಳು ಆಪ್ ನಲ್ಲಿ ಪ್ರಸಾರ ಮಾಡುವ ಸಮಯದಲ್ಲಿ ಕೇಳಬಹುದು ಎಂದು ಆಕಾಶವಾಣಿ ನಿಲಯದ ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್. ಭಟ್ ಮತ್ತು ಪ್ರಸಾರ ಕಾರ್ಯದ ಮುಖ್ಯಸ್ಥ ಡಿ.ಆರ್.ಶಿವಪ್ರಕಾಶ್ ಪ್ರಕಟಣೆಯಲ್ಲಿ.

 

Related Post

Leave a Reply

Your email address will not be published. Required fields are marked *