ಚಿತ್ರದುರ್ಗ : ಆಡಳಿತ ಯಂತ್ರ ಚುರುಕುಗೊಳಿಸುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಗೆ ಈಚೆಗೆ ಭೇಟಿ ನೀಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಭೇಟಿಯ ಫಲಶೃತಿ ಕುರಿತು ಪ್ರಸಾರ ಭಾರತಿ, ಆಕಾಶವಾಣಿ ಚಿತ್ರದುರ್ಗಕ್ಕೆ ನೀಡಿದ ಸಂದರ್ಶನ ಇದೇ ಜ.27ರಂದು ಬೆಳಿಗ್ಗೆ 8.30ಕ್ಕೆ ಆಕಾಶವಾಣಿ ಚಿತ್ರದುರ್ಗ ಎಫ್.ಎಂ.ನಲ್ಲಿ ಪ್ರಸಾರವಾಗಲಿದೆ.
ಉಪಲೋಕಾಯುಕ್ತ ಸಂದರ್ಶನವನ್ನು ಪ್ರಸಾರ ವಿಭಾಗದ ಮುಖ್ಯಸ್ಥರಾದ ಡಿ.ಆರ್.ಶಿವಪ್ರಕಾಶ್ ಅವರು ನಡೆಸಿದ್ದು, ಡಾ.ನವೀನ್ ಮಸ್ಕಲ್ ಸಹಕಾರ ನೀಡಿದ್ದಾರೆ.
ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನೆಲೆಯಲ್ಲಿ ನಿತ್ಯ ನಿರಂತರವಾಗಿ “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಸದಾಶಯದೊಂದಿಗೆ ಆಕಾಶವಾಣಿ ಚಿತ್ರದುರ್ಗದ ಈ ಎಲ್ಲ ಈ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ Aakashavani Chitradurga Live streaming ಮತ್ತು prasara bharathi news on air appನಲ್ಲಿ ಪ್ರಸಾರ ಸಮಯದಲ್ಲಿ ಕೇಳಬಹುದು ಎಂದು ಆಕಾಶವಾಣಿ ನಿಲಯದ ಮುಖ್ಯಸ್ಥ ಎಸ್.ಆರ್. ಭಟ್, ತಾಂತ್ರಿಕ ವಿಭಾಗದ ಮುಖ್ಯಸ್ಥ ಕೆ.ಕೆ.ಮಣಿ ಮತ್ತು ಪ್ರಸಾರ ಕಾರ್ಯ ನಿರ್ವಹಣಾಧಿಕಾರಿ ಡಿ.ಅರ್.ಶಿವಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.