Breaking
Thu. Jan 30th, 2025

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ 48.25 ಲಕ್ಷ ಅನುದಾನ…!

ವಿವಿಧ ವಾರ್ಡ್, ಕೊಠಡಿ ಉದ್ಘಾಟಿಸಿದ ಶಾಸಕ ಬಿ.ಎಂ.ನಾಗರಾಜ ಆರೋಗ್ಯ ಇಲಾಖೆಯಲ್ಲಿ ದೊರಕುವ ಗುಣಮಟ್ಟ ಸೇವೆ ಪಡೆದುಕೊಳ್ಳಲು ಕರೆ

ಬಳ್ಳಾರಿ : ರಾಜ್ಯ ಸರ್ಕಾರವು ‘ನಿಮ್ಮ ಆರೋಗ್ಯ ನಮ್ಮ ಬದ್ದತೆ’ ಎಂಬ ಧ್ಯೇಯ ವಾಕ್ಯದಡಿ ಸಮುದಾಯಕ್ಕೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುತ್ತಿದೆ, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಅವರು ಹೇಳಿದರು.

ರಾಜ್ಯ ಸರ್ಕಾರದ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 48.25 ಲಕ್ಷ ಅನುದಾನದಡಿ ಸಿರುಗುಪ್ಪ ತಾಲ್ಲೂಕಿನ ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಲಾಗಿದೆ ಹೆಚ್ಚುವರಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಾರ್ಡ್ ಆರೋಗ್ಯ ಆಸ್ಪತ್ರೆ, ಚುಚ್ಚುಮದ್ದು ಕೊಠಡಿ, ವಿತರಣೆ ಮನೆಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಹೇಳಿದರು.

ಸುಸಜ್ಜಿತ ಆಸ್ಪತ್ರೆಗಳಲ್ಲಿ ಸುಸಜ್ಜಿತ ಉಪಕರಣಗಳು ನುರಿತ ವೈದ್ಯರು ಮತ್ತು ಸಿಬ್ಬಂದಿ ಒದಗಿಸಿದ್ದು, ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆಯಿಲ್ಲದಂತೆ ಸುಸಜ್ಜಿತ ಕಟ್ಟಡಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ನಡೆಯುತ್ತಿವೆ. ಇದು ನಿಮ್ಮ ಆಸ್ಪತ್ರೆ ಎಂಬ ಭಾವನೆಯೊಂದಿಗೆ ಜನತೆಯ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಬೇಕು. ಇನ್ನು ಹೆಚ್ಚಿನ ರೀತಿಯಲ್ಲಿ ಮೂಲಭೂತ ಸೌಲಭ್ಯ ಒದಗಿಸುವ ಕಾರ್ಯಗಳಿಗೆ ಬೆಂಬಲಿಸಬೇಕು.

ಗ್ರಾಮೀಣ ಪ್ರದೇಶದ ಆರೋಗ್ಯ ಸೌಲಭ್ಯಗಳು ಹತ್ತಿರದಲ್ಲೇ ದೊರೆಯುವುದರಿಂದ ಆರ್ಥಿಕ ಹೊರೆ ತಪ್ಪಿಸುವ ಕಾರ್ಯ ಸರ್ಕಾರ ಮಾಡುತ್ತಿದೆ ಎಂದು ಅವರು ಪ್ರಕಟಿಸಿದ್ದಾರೆ.

ಹಳೆ ಕಟ್ಟಡಗಳನ್ನು ತೆರೆಯುವ ಮೂಲಕ ಹೊಸ ಕಟ್ಟಡಗಳ ನಿರ್ಮಾಣ ಮತ್ತು ಅಗತ್ಯತೆಗಳಿಗೆ ಸುಸಜ್ಜಿತ ಆಸ್ಪತ್ರೆಗಳನ್ನು ಒದಗಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಕಾರ್ಯಕ್ಕೆ ನಿರಂತರವಾಗಿ ಕಾರ್ಯಯೋಜನೆಯನ್ನು ಆಯೋಜಿಸಲಾಗಿದೆ.

ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇಲ್ಲದಂತೆ ಸರ್ಕಾರವು ಕ್ರಮವಹಿಸಿದ್ದು, ಅಗತ್ಯ ಇರುವ ಆರೋಗ್ಯ ಕೇಂದ್ರಗಳಿಗೆ ನಿಯಮಾನುಸಾರ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಲಿದೆ. ಮುಂದಿನ ದಿನಗಳಲ್ಲಿ ಸಿರುಗುಪ್ಪ ತಾಲ್ಲೂಕಿನಲ್ಲಿಯೇ ಹೆರಿಗೆಗಾಗಿ ತಾಯಿ ಮಗುವಿನ ಆಸ್ಪತ್ರೆ ನಿರ್ಮಿಸಲು ಎಂದು ಶಾಸಕರು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಮೇಶ ಬಾಬು ಅವರು ಮಾತನಾಡಿ, ಜಿಲ್ಲೆಯಲ್ಲಿ ಹೆರಿಗೆಗೆ ಆಗಮಿಸುವ ಗರ್ಭಿಣಿ ಮಹಿಳಾ ವೈದ್ಯರಿಗೆ ದಿನಾಂಕ 3 ದಿನಗಳ ಮೊದಲು ದಾಖಲಾತಿ ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ಗರ್ಭಿಣಿಯರ ಆರೋಗ್ಯ ಸಮಸ್ಯೆಗಳ ಗುರ್ತಿಸಿ ಸರಳ ಹೆರಿಗೆ ಮಾಡಿಸಲು ಅಥವಾ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಲು ಸಹಾಯಕ ಅಧಿಕಾರಿಗಳನ್ನು ನೇಮಿಸಲಾಗಿದೆ.

ರಕ್ತಹೀನತೆ ಇರುವವರಿಗೆ ಎಫ್.ಎಸ್.ಸಿ.ಎಮ್ ಹಾಗೂ ಐರನ್ ಸುಕ್ರೋಸ್ ಚುಚ್ಚಮದ್ದು ಉಚಿತವಾಗಿ ನೀಡಲಾಗುತ್ತಿದೆ, ಪ್ರತಿ 9 ಮತ್ತು 24 ರಂದು ಪ್ರಧಾನಮಂತ್ರಿ ಮಾತೃತ್ವ ಅಭಿಯಾನದಡಿ ಪೌಷ್ಠಿಕ ಆಹಾರದ ಬೆಂಬಲದ ಊಟದ ವ್ಯವಸ್ಥೆ ಸಹ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮಾಡಲ್ಪಟ್ಟಿದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾರದಮ್ಮ, ಸ್ಥಳದಾನಿಗಳಾದ ರಂಗಾರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ವೀರೇಶ ಗೌಡ, ವಿರುಪಾಕ್ಷಿ ಗೌಡ, ಬದ್ರಿ ಗೌಡ, ಆಡಳಿತ ವೈದ್ಯಾಧಿಕಾರಿ ಡಾ.ಸುನಿಲ್, ಜನರೋಗ್ಯ ಸಮಿತಿ ಸದಸ್ಯರು ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.

ಸನ್ಮಾನ: ಸ್ಥಳದಾನಿಗಳಾದ ರಂಗಾರೆಡ್ಡಿ ಹಾಗೂ ಕುಟುಂಬದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

 

Related Post

Leave a Reply

Your email address will not be published. Required fields are marked *